ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಮತ್ತು ಕೆ ವಿ ಜಿ ಕಾನೂನು ಮಹಾ ವಿದ್ಯಾಲಯ ಆಶ್ರಯದಲ್ಲಿ ರಾಜ್ಯ ಕಾನೂನು ವಿ.ವಿ ಮಟ್ಟದ ಫುಟ್ಬಾಲ್ ಪಂದ್ಯಾಟ

0

ರಾಜ್ಯ ಮಟ್ಟದ ತಂಡಗಳು ಭಾಗಿ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಮತ್ತು ಸುಳ್ಯ ಕೆ ವಿ ಜಿ ಕಾನೂನು ಮಹಾ ವಿದ್ಯಾಲಯದ ಆಶ್ರಯದಲ್ಲಿ ಮೇ ೧೩ ಹಾಗೂ ೧೪ ರಂದು ಎರಡು ದಿನಗಳಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಕಾನೂನು ವಿ. ವಿ. ಮಟ್ಟದ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸುಳ್ಯ ಎನ್ ಎಂ ಸಿ ಮೈದಾನದಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡಮಿ ಆಫ್ ಲಿಬರಲ್ ಎಜುಕೇಷನ್ ನ ಅಧ್ಯಕ್ಷ ರಾದ ಡಾ. ಕೆ ವಿ ಚಿದಾನಂದ ರವರು ವಹಿಸಿದ್ದರು.
ಸ. ಪ್ರ. ದ ಕಾಲೇಜು ಪ್ರಾಂಶುಪಾಲರಾದ ಸತೀಶ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.


ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ.ಥಿವರು ಮೈದಾನದಲ್ಲಿ ಪಂದ್ಯಾಕೂಟಕ್ಕೆ ಚೆಂಡು ಪಾಸ್ ಮಾಡುವ ಮೂಲಕ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕೆ ವಿ ಜಿ ಕಾನೂನು ಮಹಾ ವಿದ್ಯಾಲಯದ ಆಡಳಿತಾಧಿಕಾರಿ ಪ್ರೊ. ಕೆ ವಿ ದಾಮೋದರ ಗೌಡ, ಪ್ರಾಂಶುಪಾಲರಾದ ಡಾ. ಉದಯ ಕೃಷ್ಣ ಬಿ, ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ್ ನಾಯ್ಕ್ ಭಟ್ಕಳ, ಉಪನ್ಯಾಸಕಿ ಶ್ರೀಮತಿ ರಶ್ಮಿ ಮೊದಲಾದವರು ಉಪಸ್ಥಿತರಿದ್ದರು.
ಪಂದ್ಯಾಕೂಟದಲ್ಲಿ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾವಿ, ಮೈಸೂರು, ಉಡುಪಿ, ಪುತ್ತೂರು, ಸುಳ್ಯ ಸೇರಿದಂತೆ ಸುಮಾರು ೧೩ ತಂಡಗಳು ಭಾಗವಹಿಸಿದ್ದು, ಇಂದು ಹಾಗೂ ನಾಳೆ ಸುಳ್ಯದಲ್ಲಿ ಫುಟ್ಬಾಲ್ ಹಬ್ಬದ ವಾತಾವರಣ ನಡೆಯಲಿದೆ.
ಡಾ. ಉದಯ ಕೃಷ್ಣ ಬಿ ಸ್ವಾಗತಿಸಿ ಉಪನ್ಯಾಸಕಿ ಬೇಬಿ ವಿದ್ಯಾ ಪಿ ಬಿ ಕಾರ್ಯಕ್ರಮ ನಿರೂಪಿಸಿ ಉಪನ್ಯಾಸಕಿ ನಯನ ವಂದಿಸಿದರು.