ಎಸ್.ಎಸ್. ಎಲ್. ಸಿ ಮರು ಮೌಲ್ಯಮಾಪನ : ಕಲ್ಲುಗುಂಡಿ ಸವೇರಪುರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಜ್ಞಾ ಕೆ .ಕೆ ಗೆ 2 ಅಂಕ ಸೇರ್ಪಡೆ

0

ಎಸ್. ಎಸ್.ಎಲ್ .ಸಿ ಫಲಿತಾಂಶ ಮೇ 9 ರಂದು ಪ್ರಕಟಗೊಂಡಿದ್ದು, ಕಲ್ಲುಗುಂಡಿ ಸವೇರಪುರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಜ್ಞಾ ಕೆ .ಕೆ ಮರು ಎಣಿಕೆಯ ನಂತರದ ಫಲಿತಾಂಶದಲ್ಲಿ 615 ರ ಬದಲಾಗಿ 617 ಅಂಕ ಗಳಿಸಿ ರಾಜ್ಯಕ್ಕೆ 9 ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇವರು ಸಂಪಾಜೆ ಜೂನಿಯರ್ ಕಾಲೇಜಿನ ದೈಹಿಕ ಶಿಕ್ಷಕರಾದ ಕುಶಾಲಪ್ಪ ಕೆ.ಮತ್ತು ಕಲ್ಲುಗುಂಡಿ ಸವೇರಪುರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿಜ್ಞಾನ ವಿಭಾಗದ ಶಿಕ್ಷಕಿಯಾದ ರೇವತಿ .ಎ ದಂಪತಿಗಳ ಪುತ್ರಿಯಾಗಿದ್ದಾರೆ.