ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ರಾಷ್ಟ್ರೀಯ ಓದುಗರ ದಿನಾಚರಣೆ ಹಾಗೂ ಮಕ್ಕಳಿಗೆ ಪುಸ್ತಕ ವಿತರಣೆ

0

ಸುಳ್ಯ ಎಂ ಬಿ ಫೌಂಡೇಶನ್ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ರಾಷ್ಟ್ರೀಯ ಓದುಗರ ದಿನಾಚರಣೆ ಕಾರ್ಯಕ್ರಮ ಜೂ.19 ರಂದು ಶಾಲೆ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ವಹಿಸಿ ನಮ್ಮ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಓದು ಬರಹವಿಲ್ಲದ ವಿಶೇಷ ಚೇತನ ಮಕ್ಕಳು ಅವರನ್ನು ಓದಲು ಮತ್ತು ಬರೆಯಲು ಕಲಿಸಿ ಸಮಾಜದ ಎಲ್ಲಾ ಮಕ್ಕಳತರ ಬೆಳೆಸಬೇಕು ಎಂಬುದು ನಮ್ಮ ಕನಸು ಅದರೂ ನಮ್ಮ ಮಕ್ಕಳು ಬಹಳ ಉತ್ತಮ ರೀತಿಯಲ್ಲಿ ಬೆಳೆಯುತ್ತಿದ್ದಾರೆ ಅದಕ್ಕಾಗಿ ಇವತ್ತು ರಾಷ್ಟ್ರೀಯ ಓದುಗರ ದಿನಾಚರಣೆ ದಿವಸ ಶಾಲೆಯಲ್ಲಿ ನಮ್ಮ ಮಕ್ಕಳನ್ನು ಓದಿಸುವ ಶಿಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸಬೇಕು ಎಂದವರು ಹೇಳಿದರು.


ಫೌಂಡೇಶನ್ ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಶಾಲೆಯ ಶಿಕ್ಷಕಿಯರಾದ ಸೌಮ್ಯ,ಸುಜಾತ,ಮೀನಾಕ್ಷಿ,ಸುಪ್ರಿತ,ತೇಜಾವತಿ,ನಿರ್ಮಲ,ಸತ್ಯವತಿ,ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿ ಕೀರ್ತಿ ನರಿಯೂರು ರವರು ಮಕ್ಕಳ ಜೊತೆ ಹುಟ್ಟು ಹಬ್ಬವನ್ನು ಆಚರಿಸಿ ಮಕ್ಕಳಿಗೆ ಪುಸ್ತಕ ಮತ್ತು ಲೇಖನಿಯನ್ನು ವಿತರಿಸಿದರು