ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗದಲ್ಲಿ ಶಾಲಾ ಮಂತ್ರಿಮಂಡಲವನ್ನು ಗೌಪ್ಯ ಮತದಾನದ ಮೂಲಕ ಜೂ. 11 ರಂದು ನಡೆಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಮಾಯಿಲಪ್ಪ ಜಿ. ಯವರ ಮಾರ್ಗದರ್ಶನದಲ್ಲಿ ಶಾಲಾ ಶಿಕ್ಷಕ ರಾಜನಾಯಕ ಟಿ ಚುನಾವಣಾ ಅಧಿಕಾರಿಯಾಗಿ, ಶಿಕ್ಷಕಿಯಾದ ಸವಿತಾ ಗುಜರನ್ ಅಧ್ಯಕ್ಷಾಧಿಕಾರಿಯಾಗಿ ಸಹಕರಿಸಿದರು.
ಶಿಕ್ಷಕರುಗಳಾದ ಅರುಣಾಕ್ಷಿ ಕೆ.ಎಲ್, ಅನ್ನಪೂರ್ಣ ಬಿ.ಸಿ, ಸೌಮ್ಯ ಎಂ, ಪೂರ್ವಿ ರೈ ಪಿ.ಎನ್, ಇಳಾಶ್ರೀ ಸಿ.ಜಿ, ವಸಂತಿ ಎನ್, ತೃಪ್ತಿ ಎಂ.ಎಂ, ವಿನಯ್ ಮತ್ತು ಪವಿತ್ರ ಇವರುಗಳು ಚುನಾವಣಾ ಕರ್ತವ್ಯ ನಿರ್ವಹಿಸಿದರು.
ನಾಯಕನ ಸ್ಥಾನಕ್ಕೆ 7ನೇ ತರಗತಿಯ ಅಹನ್ ಗೌಡ ಕೆ ಎಚ್, ಮೊಹಮ್ಮದ್ ಶಮ್ಮಾಸ್ ಕೆ, ಪುಣ್ಯ ಕೆ, ಮನ್ವಿ ಪಿ, ಧೃತಿ ತಿ ಕೆ ಆರ್, ಗಗನ್ ಬಿ.ಎಂ, ಮಹತಿ ಆಕಿರೆಕಾಡು ರಾವ್ ಮತ್ತು ರಶ್ಮಿ ಪೈ ಸ್ಪರ್ಧೆಯಲ್ಲಿದ್ದರು.









ಶಾಲಾ ಉಪನಾಯಕನ ಸ್ಥಾನಕ್ಕೆ 6 ನೇ ತರಗತಿಯ ಶ್ಲಾಘ್ಯ ಕೆ ಎಸ್, ಚರಿಷ್ಮ ವಿ, ವಲ್ಲೀಶರಾಮ, ಅಕ್ಷಯ್ ಸಿ ಪಿ , ಜೆ ಸನ್ನಿಧಿ, ಸನ್ವಿತ್ ರೈ ಮತ್ತು ರಕ್ಷಿತಾ ಸ್ಪರ್ಧಿಸಿದ್ದರು.
ಮತದಾನ ದಿನದಂದು ಶಾಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡು ತಮ್ಮ ನೆಚ್ಚಿನ ನಾಯಕ ಮತ್ತು ಉಪನಾಯಕನನ್ನು ಆಯ್ಕೆ ಮಾಡಿದರು.
ಪ್ರಬಲ ಪೈಪೋಟಿಯಲ್ಲಿ 90 ಮತಗಳೊಂದಿಗೆ ನಾಯಕನ ಸ್ಥಾನಕ್ಕೆ ಮಹಮ್ಮದ್ ಶಮ್ಮಾಸ್ ಕೆ (7 ನೇತರಗತಿ) ಹಾಗೂ ಶಾಲಾ ಉಪನಾಯಕನ ಸ್ಥಾನಕ್ಕೆ ಶ್ಲಾಘ್ಯ ಕೆ ಎಸ್ (6ನೇ ತರಗತಿ) ಆಯ್ಕೆಗೊಂಡರು.
ಶಾಲಾ ಸಂಸತ್ತಿಗೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದರು.
ಗೃಹ ಮಂತ್ರಿಯಾಗಿ ಪಿ ಮನ್ವಿ, ಉಪಗ್ರಹ ಮಂತ್ರಿಯಾಗಿ ಅಕ್ಷಯ್ ಸಿ ಪಿ , ಶಿಕ್ಷಣ ಮಂತ್ರಿಯಾಗಿ ಪುಣ್ಯ ಜಿ ಕೆ, ಉಪ ಶಿಕ್ಷಣ ಮಂತ್ರಿಯಾಗಿ ಭಕ್ತಿ, ವಾರ್ತಾ ಮಂತ್ರಿಯಾಗಿ ಪ್ರಿಯಾ ಎ, ಉಪವಾರ್ತಾ ಮಂತ್ರಿಯಾಗಿ ಗ್ರೀಷ್ಮ ಕೆ, ಆರೋಗ್ಯ ಮಂತ್ರಿಯಾಗಿ ರಶ್ಮಿ ಪೈ, ಉಪ ಆರೋಗ್ಯ ಮಂತ್ರಿಯಾಗಿ ಯುಕ್ತ ಕೆ ಎಚ್, ಸಾಂಸ್ಕೃತಿಕ ಮಂತ್ರಿ ಯಾಗಿ ಮಹತಿ ಆಕಿರೆಕಾಡು ರಾವ್ ಮತ್ತು ವರ್ಷ ಎನ್ ಡಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ರಕ್ಷಿತಾ ಆರ್, ಪರಿಸರ ಮಂತ್ರಿಯಾಗಿ ದೃತಿ ಕೆ ಆರ್, ಉಪಪರಿಸರ ಮಂತ್ರಿಯಾಗಿ ಸನ್ವಿತ್ ರೈ, ನೀರಾವರಿ ಮಂತ್ರಿಯಾಗಿ ಗಗನ್ ಬಿ ಎಂ, ಉಪ ನೀರಾವರಿಯಾಗಿ ವಲ್ಲೀಶ ರಾಮ ಎಂ, ತಂತ್ರಜ್ಞಾನ ಮಂತ್ರಿಯಾಗಿ ಅಹನ್ ಗೌಡ ಕೆ ಎಚ್, ಉಪ ತಂತ್ರಜ್ಞಾನ ಮಂತ್ರಿಯಾಗಿ ರಕ್ಷಿತ್ ಎಂ, ಕ್ರೀಡಾ ಮಂತ್ರಿಯಾಗಿ ಧನುಷ್ ನಾಯಕ್ ಕೆ, ಉಪ ಕ್ರೀಡಾ ಮಂತ್ರಿಯಾಗಿ ಗೌಶಿಕ್ ಆರ್, ಆಹಾರಮಂತ್ರಿಯಾಗಿ ತರುಣ್ ಜೆ ಕೆ ಮತ್ತು ಜಸ್ವಿತ್ ಎನ್ ಎನ್, ವಿರೋಧ ಪಕ್ಷದ ನಾಯಕಿಯಾಗಿ ಬಿ ಮೌತಿಕ, ಉಪ ನಾಯಕಿಯಾಗಿ ವರ್ಷಿಣಿ ಜಿ ಎನ್, ಸದಸ್ಯರಾಗಿ ಚರಿಷ್ಮಾ, ಸನ್ನಿಧಿ ,ನಿಖಿಲ್ ಸಿವಿ, ಪ್ರಾರ್ಥನಾ ಎಸ್ ಆರ್ ಮತ್ತು ಗೌತಮ್ ಕೆ ಬಿ ಆಯ್ಕೆಯಾದರು.










