
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಹಾಗೂ ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಪ್ರತಿ ರವಿವಾರ ನಿರಂತರವಾಗಿ ಸ್ವಚ್ಛತಾ ಅಭಿಯಾನ ನಡೆಯುತ್ತಿದ್ದು ಅದರಂತೆ ಜೂ. 29 ರಂದು ಸ್ವಚ್ಛತಾ ಅಭಿಯಾನ ನಡೆಯಿತು.









ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ಸ್ ನ ಸುಮಾರು ಮೂವತ್ತಕ್ಕೂ ಮಿಕ್ಕಿ ಸ್ವಯಂಸೇವಕರು ಕುಮಾರಧಾರ ಸೇತುವೆಯ ಮೇಲೆ ಇದ್ದಂತಹ ಕಸ ಕಡ್ಡಿಗಳು,ಮಣ್ಣು, ತರಗೆಲೆಗಳು, ಹಾಗೂ ಕೊಚ್ಚೆ ವಸ್ತುಗಳನ್ನ ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಅದರೊಂದಿಗೆ ಕುಮಾರಧಾರ ಸ್ನಾನ ಘಟ್ಟ ಪರಿಸರದಲ್ಲಿಯೂ ಕೂಡ ಇದ್ದ ಕಸ ಕಡ್ಡಿಗಳು ಪ್ಲಾಸ್ಟಿಕ್ ಚೀಲಗಳು ಪ್ಲಾಸ್ಟಿಕ್ ಬಾಟಲುಗಳು ಅನುಪಯುಕ್ತ ವಸ್ತುಗಳನ್ನ ತೆರವುಗೊಳಿಸಿರುವರು. ಈ ಸಂದರ್ಭ ಸುಬ್ರಹ್ಮಣ್ಯ ಕುಕ್ಕೆಶ್ರೀ ಸೀನಿಯರ್ ಚೇಂಬರ್ ನ ಅಧ್ಯಕ್ಷ ವೆಂಕಟೇಶ ಎಚ್ ಎಲ್, ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟಿನ ಸಂಸ್ಥಾಪಕ ಡಾl ರವಿ ಕಕ್ಕೆ ಪದವು, ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಕಾರ್ಯದರ್ಶಿ ಗೋಪಾಲ ಎಣ್ಣೆ ಮಜಲ್, ಸಮಾಜ ಸೇವಾ ಟ್ರಸ್ಟ್ ನ ಸ್ವಯಂಸೇವಕರು ಭಾಗವಹಿಸಿದ್ದರು ಶ್ರೀಮತಿ ಗೀತಾ ರವಿ ಕಕ್ಕೆ ಪದವು ಅವರು ಎಲ್ಲಾ ಸ್ವಯಂಸೇವಕರಿಗೆ ಬೆಳಗಿನ ಉಪಹಾರದ ಒದಗಿಸಿದರು.











