ಸುಳ್ಯ ವಲಯ ಮಂಜುನಾಥೇಶ್ವರ ಭಜನಾ ಪರಿಷತ್ ಸಭೆ

0

ವಲಯ ಸಮಿತಿ ರಚನೆ: ಅಧ್ಯಕ್ಷೆ-ಸವಿತಾ ಸಂದೇಶ್ ಸೂಂತೋಡು,
ಕಾರ್ಯದರ್ಶಿ – ಪ್ರಿಯಾ ಬಳ್ಳಡ್ಕ,
ಕೋಶಾಧಿಕಾರಿ- ನಾಗವೇಣಿ ಜಯನಗರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ಹಾಗೂ ಶ್ರೀ ಮಂಜುನಾಥೇಶ್ವರ ವಲಯ ಭಜನಾ ಪರಿಷತ್ ನ ಸಭೆಯನ್ನು ವಲಯಾಧ್ಯಕ್ಷ ಬಾಲಚಂದ್ರ ಸರಳಿಕುಂಜ ರವರ ಅಧ್ಯಕ್ಷತೆಯಲ್ಲಿ ಜೂ.29 ರಂದು ಯೋಜನಾಧಿಕಾರಿ ಕಚೇರಿಯಲ್ಲಿ ನಡೆಯಿತು.

ತಾಲೂಕು ಭಜನಾ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಯವರು ದೀಪ ಪ್ರಜ್ವಲಿಸಿದರು.
ಯೋಜನಾಧಿಕಾರಿ ಮಾಧವ ಗೌಡ ರವರು ಭಜನಾ ಪರಿಷತ್ ನ ಧ್ಯೇಯ ಉದ್ದೇಶ, ಸ್ಥಳೀಯ ಭಜನಾ ಮಂಡಳಿಗಳ ಬಲಪಡಿಸುವಿಕೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಸಮಾಜಮುಖಿ ಸೇವೆಗಳಲ್ಲಿ ಭಜನಾ ಮಂಡಳಿಗಳ ಹಾಗೂ ಭಜನಾ ಪರಿಷತ್ ನ ಪಾತ್ರದ ಬಗ್ಗೆ ಪ್ರಾಸ್ತಾವಿಕ ಮಾತಿನೊಂದಿಗೆ ಮಾಹಿತಿ ನೀಡಿದರು.
ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸೋಮಶೇಖರ ಪೈಕ, ಕಾರ್ಯದರ್ಶಿ ಟಿ.ಎನ್ ಸತೀಶ್, ಅರಂತೋಡು ಭಜನಾ ಪರಿಷತ್ ವಲಯಾಧ್ಯಕ್ಷೆ ಶ್ರೀಮತಿ ಭಾರತಿಉಳುವಾರು,
ಮೇಲ್ವಿಚಾರಕ ದಿನೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸುಳ್ಯ ವಲಯದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸವಿತಾ ಸಂದೇಶ್ ಸೂಂತೋಡು, ಕಾರ್ಯದರ್ಶಿ ಪ್ರಿಯಾ ಬಳ್ಳಡ್ಕ, ಕೋಶಾಧಿಕಾರಿ ನಾಗವೇಣಿ ಜಯನಗರ, ಉಪಾಧ್ಯಕ್ಷರಾಗಿ ಮೋಹನ್ ಕಲ್ಲುಮುಟ್ಲು,
ಜತೆ ಕಾರ್ಯದರ್ಶಿ ಪೂರ್ಣಿಮಾ ಪಾನತ್ತಿಲ ರವರನ್ನು ಆಯ್ಕೆ ಮಾಡಲಾಯಿತು. ವಲಯದ ಎಲ್ಲಾ ಭಜನಾ ಮಂಡಳಿಯಿಂದ ಓರ್ವ ಸದಸ್ಯರನ್ನು ಆಯ್ಕೆ ಮಾಡುವುದಾಗಿ ನಿರ್ಣಯಿಸಲಾಯಿತು. ಸೇವಾ ಪ್ರತಿನಿಧಿ
ಶ್ರೀಮತಿ ಸವಿತಾ ಪ್ರಾರ್ಥಿಸಿದರು.


ಸೇವಾ ಪ್ರತಿನಿಧಿ ಸುರೇಶ್ ಪರಿವಾರಕಾನ ಸ್ವಾಗತಿಸಿದರು. ಆಲೆಟ್ಟಿ ಸೇವಾ ಪ್ರತಿನಿಧಿ ಶ್ರೀಮತಿ ರೋಹಿಣಿ ಕುಡೆಕಲ್ಲು ವಂದಿಸಿದರು.
ವಲಯದ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದರು.