ಸುಳ್ಯ ತಾಲೂಕು ವಕೀಲರ ಸಂಘದ ವತಿಯಿಂದ ಹಿರಿಯ ನ್ಯಾಯವಾದಿ ದಿ. ಕುಂಞಿ ಪಳ್ಳಿಯವರಿಗೆ ಶ್ರದ್ಧಾಂಜಲಿ ಸಭೆ

0

ಕುಂಞಿಪಳ್ಳಿವರ ಆದರ್ಶ ಜೀವನ ಹಾಗೂ ಅವರ ಮನೆತನದ ಕೊಡುಗೆಯ ಬಗ್ಗೆ ನೆನಪಿಸಿಕೊಂಡ ಹಿರಿಯ ವಕೀಲರುಗಳು

ಹಿರಿಯ ವಕೀಲ ಹಾಗೂ ನೋಟರಿ ಕುಂಞಿಪಳ್ಳಿ ರವರ ಶ್ರದ್ಧಾಂಜಲಿ ಸಭೆಯನ್ನು ಜು. 2 ರಂದು ಸುಳ್ಯ ತಾಲೂಕು ವಕೀಲರ ಸಂಘದ ವತಿಯಿಂದ ವಕೀಲರ ಸಂಘದ ಸಭಾಂಗಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿಯವರು ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ವಕೀಲರಾದ ದಳ ಸುಬ್ರಾಯ ಭಟ್ ಎಂ ವೆಂಕಪ್ಪ ಗೌಡ ಹಾಗೂ ಸೂರ್ಯನಾರಾಯಣ ಭಟ್ ರವರು ಕುಂಞಿ ಪಳ್ಳಿರವರ ಬಗ್ಗೆ ಮಾತನಾಡಿ ಅವರ ಆದರ್ಶ ಜೀವನ ಹಾಗೂ ಸೇವೆಯ ನಿಷ್ಠೆ ಮತ್ತು ಅವರು ಬೆಳೆದು ಬಂದ ಮನೆತನದ ಬಗ್ಗೆ ಅವರು ಸಮಾಜದಲ್ಲಿ ಸೌಹಾರ್ದತೆಯ ಜೀವನವನ್ನು ಜೀವಿಸಿದ ಬಗ್ಗೆ ಮಾತನಾಡಿ ನುಡಿ ನಮನವನ್ನು ಸಲ್ಲಿಸಿದರು.

ಹಿರಿಯ ವಕೀಲ ಜಗದೀಶ್ ಹುದೇರಿ ರವರು ಕೂಡ ಈ ಸಂದರ್ಭದಲ್ಲಿ ಮಾತನಾಡಿ ಕುಂಞಿ ಪಳ್ಳಿ ರವರ ಸೌಹಾರ್ದಯುತ ಜೀವನ ಮತ್ತು ಅವರು ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಸದಸ್ಯರುಗಳು ಹಾಗೂ ಹಿರಿಯ,ಕಿರಿಯ ವಕೀಲರುಗಳು ಭಾಗವಹಿಸಿದ್ದರು.
ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಡಿ ಪಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಕುಂಞಿ ಪಳ್ಳಿ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸಲಾಯಿತು.