
ಕೆ.ಎಸ್.ಆರ್.ಟಿ.ಸಿ ಸುಳ್ಯ ವಿಭಾಗದಲ್ಲಿ ಸಂಚಾರ ನಿಯಂತ್ರಕರಾಗಿ ಸೇವೆ ಸಲ್ಲಿಸುತ್ತಿದ್ದ ಕೃಷ್ಣಪ್ಪ ನಾಯ್ಕ ರವರು ಜು.31 ರಂದು ಸೇವೆಯಿಂದ ನಿವೃತ್ತಿ ಹೊಂದಿದರು.
ಇವರು14.5.1994 ರಲ್ಲಿ ಕ.ರಾ.ರ.ಸಾ.ಸಂಸ್ಥೆಯ ಮಂಗಳೂರು ವಿಭಾಗದಲ್ಲಿ ಪುತ್ತೂರು ಘಟಕದಲ್ಲಿ ನಿರ್ವಾಹಕನಾಗಿ ಕೆಲಸಕ್ಕೆ ಸೇರ್ಪಡೆಗೊಂಡು, ಪುತ್ತೂರು ಘಟಕದಲ್ಲಿ 2 ತಿಂಗಳು ಕರ್ತವ್ಯ ನಿರ್ವಹಿಸಿ, ನಂತರ ಮಂಗಳೂರು 2 ನೇ ಘಟಕಕ್ಕೆ ವರ್ಗಾವಣೆಗೊಂಡರು. ಸುಮಾರು 12 ವರ್ಷ ಕರ್ತವ್ಯ ನಿರ್ವಹಿಸಿ ನಂತರ ಕೋರಿಕೆ ಮೇರೆಗೆ ಬಿ.ಸಿ.ರೋಡು ಘಟಕದಲ್ಲಿ 2005 ರಲ್ಲಿ ಸೇರ್ಪಡೆಗೊಂಡು ಸುಮಾರು 14 ವರ್ಷಗಳ ಕಾಲ ನಿರ್ವಹಕನಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.ನಂತರ ಸಂಚಾರ ನಿಯಂತ್ರಕರಾಗಿ ಮುಂಭಡ್ತಿಗೊಂಡು ಪುತ್ತೂರು ವಿಭಾಗದ ಸುಳ್ಯ ಘಟಕದ ಸುಳ್ಯ ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.









ಪತ್ನಿ ಮಧುಮತಿ ಗೃಹಿಣಿಯಾಗಿದ್ದು ಈರ್ವರು ಪುತ್ರಿಯರಲ್ಲಿ
ಪ್ರಥಮ ಪುತ್ರಿ ಯುಕ್ತಾ ಪಿ.ಕೆ, ಬಿ.ಇ ಕಂಪ್ಯೂಟರ್ ಸೈನ್ಸ್ ಮಾಡಿ ಬೆಂಗಳೂರಿನಲ್ಲಿ ಬೆಸ್ಕಾಂ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಇನ್ನೋರ್ವ ಪುತ್ರಿ ಗ್ರೀಷ್ಮ ಪಿ.ಕೆ NITK ಸುರತ್ಕಲ್ ನಲ್ಲಿ ಬಿ.ಟೆಕ್ ಮೆಕ್ಯಾನಿಕಲ್ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರುತ್ತಾಳೆ.










