ಮಂಡೆಕೋಲು ಶಾಲೆಯ ಸಹಶಿಕ್ಷಕಿ ಶ್ರೀಮತಿ ಲಕ್ಷ್ಮೀ ಸೇವಾ ನಿವೃತ್ತಿ

0


ಮಂಡೆಕೋಲು ಸ.ಉ.ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಶ್ರೀಮತಿ ಲಕ್ಷ್ಮೀ ಬಿ.ಎಸ್.ರವರು ಜು.೩೧ರಂದು ಸೇವೆಯಿಂದ ನಿವೃತ್ತಿ ಹೊಂದಿದರು.


ಗುತ್ತಿಗಾರು ಗ್ರಾಮದ ಮುತ್ಲಾಜೆ ಸ.ಕಿ.ಪ್ರಾ. ಶಾಲೆಯಲ್ಲಿ ೧೯೯೬ರಲ್ಲಿ ಶಿಕ್ಷಕಿಯಾಗಿ ಸರಕಾರಿ ಸೇವೆ ಆರಂಭಿಸಿದ ಇವರು, ಆ ಬಳಿಕ ೧೯೯೯ರಲ್ಲಿ ಸ.ಕಿ.ಪ್ರಾ.ಶಾಲೆ ಇರುವಂಬಳ್ಳಕ್ಕೆ ವರ್ಗಾವಣೆಗೊಂಡು ಬಂದರು. ೨೦೦೩ರಲ್ಲಿ ಸ.ಕಿ.ಪ್ರಾ.ಶಾಲೆ ಪುತ್ಯ ಇಲ್ಲಿಗೆ ವರ್ಗಾವಣೆಗೊಂಡ ಇವರು, ೨೦೧೬ರಲ್ಲಿ ಮಂಡೆಕೋಲಿನ ಮುರೂರು ಕಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡರು. ಅಲ್ಲಿಂದ ೨೦೧೬ ಅಕ್ಟೋಬರ್‌ನಲ್ಲಿ ಮತ್ತೆ ಮಂಡೆಕೋಲು ಸ.ಉ.ಹಿ.ಪ್ರಾ.ಶಾಲೆಗೆ ಕರ್ತವ್ಯಕ್ಕೆ ಬಂದರು. ಆ ಬಳಿಕ ಪುತ್ಯ ಶಾಲೆಯಲ್ಲಿ ೭ ವರ್ಷಗಳ ಕಾಲ ನಿಯೋಜನೆಯ ಮೇರೆಗೆ ಕರ್ತವ್ಯ ನಿರ್ವಹಿಸಿದರು. ಶಿಕ್ಷಣ ಇಲಾಖೆಯಲ್ಲಿ ಸುಮಾರು ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ತಮ್ಮ ಸೇವಾ ಅವಧಿಯಲ್ಲಿ ಶಿಕ್ಷಣ ಪ್ರೇಮಿಯಾಗಿರುವ ರವಿಪ್ರಕಾಶ್ ಅಟ್ಲೂರುರವರು ಅವರ ತಂದೆ ನಿವೃತ್ತ ಶಿಕ್ಷಕ ದಿ. ವೆಂಕಟಕೃಷ್ಣಯ್ಯ ಅವರ ಸ್ಮರಣಾರ್ಥ ಕೊಡಮಾಡಿದ ಸುಳ್ಯ ತಾಲೂಕು ಮಟ್ಟದ ಕ್ರಿಯಾಶೀಲ ಶಿಕ್ಷಕ ಪ್ರಶಸ್ತಿಗೆ ಇವರು ಭಾಜನರಾಗಿದ್ದರು.

ಮಂಡೆಕೋಲು ಗ್ರಾ.ಪಂ. ಸಹಿತ ಜಂಟೀ ಸಂಘಗಳು ಕೊಡ ಮಾಡಿದ ಪಡುಮಲೆ ಯಶಸ್ವಿ ಸಾಧನಾ ಶ್ರೀ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಪಠ್ಯದ ಜತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ, ಎಸ್.ಡಿ.ಎಂ.ಸಿ. ಸದಸ್ಯರ, ಪೋಷಕರ ಹಾಗೂ ಸಮುದಾಯ, ಜನಪ್ರತಿನಿಧಿಗಳ ಇಲಾಖೆಯ ಸಹಕಾರದೊಂದಿಗೆ ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಶ್ರಮಿಸಿದ್ದಾರೆ. ಇವರು ಮಂಡೆಕೋಲು ಗ್ರಾಮದ ಮಾವಂಜಿ ಬರೆಮೇಲು ಕರುಣಾಕರ ಎಂ. ಇವರ ಪತ್ನಿ. ಪುತ್ರಿ ಹಂಸಿಕಾ ಎಂ.ಕೆ. ಎಂ.ಎಸ್ಸಿ ಪದವಿ ಮುಗಿಸಿ ಕೇಂಬ್ರಿಡ್ಜ್ ಮೊಂಟೆಸರಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪುತ್ರ ಸುಜ್ಞಾನ ಎಂ ಕೆ ಸೀನಿಯರ್ ಟ್ಯಾಕ್ಸ್ ಅನಾಲಿಸ್ಟ್ ಆಗಿ ಇವೈ ಕಂಪೆನಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.