ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಕಛೇರಿ ಮುಖ್ಯಸ್ಥ ಪದ್ಮನಾಭ ಶೆಟ್ಟಿಗಾರ್ ನಿವೃತ್ತಿ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಕಛೇರಿ ಮುಖ್ಯಸ್ಥ ಪದ್ಮನಾಭ ಶೆಟ್ಟಿಗಾರ್ ಜು.೩೧ ರಂದು ಸೇವಾ ನಿವೃತ್ತಿ ಹೊಂದಿದರು.

ಸುದೀರ್ಘ ೩೯ ವರ್ಷ ಕಾಲ ಸೇವೆ ಸಲ್ಲಿಸಿರುವ ಇವರು ೧೯೮೬ರಲ್ಲಿ ಕುಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಿನಗೂಲಿ ನೌಕರನಾಗಿ ಕರ್ತವ್ಯಕ್ಕೆ ಸೇರಿದ್ದರು. ಬಳಿಕ ಖಾಯಂಗೊಂಡು ಛತ್ರ, ಅಫೀಸ್, ಡೈನಿಂಗ್ ಹಾಲ್, ಜಮಾ ಉಗ್ರಾಣ, ಹೀಗೆ ಹಲವು ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಬಹುತೇಕ ಅವದಿ ೩೫ ವರ್ಷ ಕಾಲ ಆಡಳಿತ ಕಛೇರಿಯಲ್ಲೇ ಕೆಲಸ ಮಾಡಿದ್ದು ಬಹುತೇಕ ಅಕೌಂಟ್ ಕೆಲಸಗಳನ್ನೇ ಮಾಡಿದ್ದರು.
ಕಳೆದ ೧೫ ವರ್ಷಗಳಿಂದ ಕಛೇರಿ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತಿದ್ದಾರೆ. ಇವರು ವಿಟ್ಲದ ಮೂಲದ ಕೊಡಂಗಾಯಿ ದಿ| ಚಂದ್ರು ಮತ್ತು ದಿ| ಭಾಗೀರಥಿ ದಂಪತಿಗಳ ಪುತ್ರ. ಪದ್ಮನಾಭ ಅವರ ಪತ್ನಿ ರಾಜಲಕ್ಷ್ಮೀ ಇದೇ ದೇವಾಲಯದಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕೆಲಸ ಮಾಡುತಿದ್ದಾರೆ. ಪುತ್ರಿ ಛಾಯ ಪಿ.ಆರ್, ಬಿ.ಎ.ಎಂ.ಎಸ್ ಓದುತಿದ್ದಾರೆ.