ಇಂಧನ ಸಚಿವರನ್ನು ಭೇಟಿಯಾದ ಸುಳ್ಯ ಕಾಂಗ್ರೆಸ್ ನಿಯೋಗ

0

ಸುಳ್ಯದ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಶೀಘ್ರ ಕಾರ್ಯಗತಕ್ಕೆ ಆಗ್ರಹ

ಸುಳ್ಯದ 110 ಕೆ.ವಿ. ಕಾಮಗಾರಿಯನ್ನು ತುರ್ತಾಗಿ ನಿರ್ವಹಿಸುವಂತೆ ಕಾಂಗ್ರೆಸ್ ನಿಯೋಗವು ಇಂಧನ ಸಚಿವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಯಿತು.

ಇದಕ್ಕೆ ಉತ್ತರಿಸಿದ ಸಚಿವ ಕೆ.ಜೆ.ಜಾರ್ಜ್ ರವರು ಅಗತ್ಯ ಬಿದ್ದರೆ ಪೋಲಿಸ್ ರಕ್ಷಣೆ ಪಡೆದುಕೊಂಡು ಕಾಮಗಾರಿಯನ್ನು ಪೂರ್ತಿಗೊಳಿಸುವಂತೆ ಸೂಚಿಸುತ್ತೇನೆ ಎಂದು ಭರವಸೆ ನೀಡಿರುತ್ತಾರೆ.

ಇದೇ ಸಂದರ್ಭದಲ್ಲಿ ಕಲ್ಮಡ್ಕ ಗ್ರಾಮದ ಕುಳಾಯಿತೋಡಿ ಹಾಗೂ ಸಂಪಾಜೆ ಎಂಬಲ್ಲಿಯ 33 ಕೆ ವಿ ಹೊಸ ಸಬ್ ಸ್ಟೇಷನ್ ವಿಚಾರವನ್ನು ಕೂಡ ಸಚಿವರ ಗಮನಕ್ಕೆ ತಂದಿದ್ದು ಈ ಬಗ್ಗೆ ಕೂಡ ಸಚಿವರು ಕೂಡಲೇ ಕಾಮಗಾರಿಯನ್ನು ಕೈಗೊತ್ತಿಕೊಳ್ಳಲು ಅಗತ್ಯ ಕ್ರಮವನ್ನು ಕೈಗೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿರುತ್ತಾರೆ. ನಿಯೋಗದಲ್ಲಿ ನಾಯಕರುಗಳಾದ ಸುಳ್ಯ ನಗರ ಪಂಚಾಯತ್ ಸದಸ್ಯರಾದ ಎಂ. ವೆಂಕಪ್ಪ ಗೌಡ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸರಸ್ವತಿ ಕಾಮತ್, ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾದ ಕೆ.ಪಿ.ಜಾನಿ, ಕಲ್ಮಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಮಡ್ಕ, ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಮೊದಲಾದವರು ಉಪಸ್ಥಿತರಿದ್ದರು.