ನ್ಯಾಯವಾದಿ ನಳಿನ್ ಕುಮಾರ್ ಕೋಡ್ತುಗುಳಿಯವರ ಕಚೇರಿ ಸ್ಥಳಾಂತರ

0

ಆಗಸ್ಟ್ 26 ರಂದು ಶ್ರೀರಾಮಪೇಟೆಯಲ್ಲಿದ್ದ ಶ್ರೀ ನ್ಯಾಯವಾದಿ ಹಾಗೂ ನೋಟರಿ ನಳಿನ್ ಕುಮಾರ್ ಕೋಡ್ತುಗುಳಿಯವರು ತನ್ನ ಕಚೇರಿಯನ್ನು ಶ್ರೀರಾಮಪೇಟೆಯಿಂದ ವಿವೇಕಾನಂದ ಸರ್ಕಲ್ ಬಳಿ ಇರುವ ತನ್ನ ಮನೆಗೆ ಸ್ಥಳಾಂತರಿಸಿದ್ದಾರೆ.
ವಿವೇಕಾನಂದ ಸರ್ಕಲ್ ನಲ್ಲಿ ಅಜ್ಜಾವರ ರಸ್ತೆಯ ಎರಡನೇ ಮನೆ “ಪ್ರಧಾನ್” ನಿವಾಸಕ್ಕೆ ಸ್ಥಳಾಂತರಗೊಂಡ ಕಚೇರಿಯಲ್ಲಿ ಇಂದು ಬೆಳಿಗ್ಗೆ ಗಣಹೋಮ ಪೂಜೆ ನೆರವೇರಿಸಿ ಶುಭಾರಂಭ ಮಾಡಲಾಯಿತು. ಕುಟುಂಬದವರು, ಬಂಧುಗಳು, ಸ್ನೇಹಿತರು ಹಾಗೂ ಹಿತೈಷಿಗಳು ನೂತನ ಕಚೇರಿಗೆ ಆಗಮಿಸಿ ಶುಭಾಶಯ ತಿಳಿಸಿದರು.

ಹೊಸ ಕಚೇರಿ ಪ್ರತಿದಿನ ಬೆಳಿಗ್ಗೆ 8ರಿಂದ ಸಂಜೆ 8ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ ಎಂದು ನಳಿನ್ ಕುಮಾರ್ ಕೋಡ್ತುಗುಳಿ ತಿಳಿಸಿದ್ದಾರೆ.