ಮಲೆನಾಡು ಚಾರಿಟೇಬಲ್ ಟ್ರಸ್ಟ್ ನ ಸತ ಪ್ರಯತ್ನದಿಂದ ಸಫಲಗೊಂಡ ಆಧಾರ್
ಸುಳ್ಯ :ಅಜ್ಜಾವರ ಮೂಲದ ತಂದೆ ಮತ್ತು ಮಗನ ಆಧಾರ್ ಕಾರ್ಡಿನ ಸಮಸ್ಯೆ 16 ವರ್ಷದ ಅಲೆದಾಟದ ಬಳಿಕ ಇದೀಗ ಸುಳ್ಯ ಮಲೆನಾಡು ಚಾರಿಟೇಬಲ್ ಟ್ರಸ್ಟಿನ ಮುಖಾಂತರ ಪರಿಹಾರ ಸಿಕ್ಕಿರುವುದು ತಂದೆ ಮಗನಲ್ಲಿ ಖುಷಿ ತಂದಿದೆ.
ಟ್ರಸ್ಟ್ ನ ಅಧ್ಯಕ್ಷ ರಿಯಾಜ್ ಕಟ್ಟೆಕಾರ್ಸ್ ರವರ ಸತ ಪ್ರಯತ್ನದಿಂದ ಆದಾರ್ ಕಾರ್ಡ್ ವ್ಯವಸ್ಥೆ ಸರಿಯಾಗಿದೆ ಎಂದು ಪಲಾನುಭವಿ ಕುಟುಂಬದ ಸದಸ್ಯರು ಸುದ್ದಿಗೆ ತಿಳಿಸಿದ್ದಾರೆ.
ಅಜ್ಜಾವರ ನೆಹರು ಗ್ರಾಮದ ಸುಂದರ ಹಾಗೂ ಪುತ್ರ ರಂಜನ್ ಎಂ ಎಸ್ ರವರ ಆಧಾರ್ ಕಾರ್ಡ್ ಈ ಸಮಸ್ಯೆ ಉಂಟುಮಾಡಿತ್ತು. ಕಾರಣ ಆಧಾರ್ ಕಾರ್ಡ್ ಬಂದ ಸಂದರ್ಭದಲ್ಲಿ ಪುತ್ರ ರಂಜನ್ ಗೆ ಮೂರು ವರ್ಷವಾಗಿದ್ದು ಆ ವೇಳೆ ಮಗನ ಆಧಾರ್ ಕಾರ್ಡಿಗೆ ತಂದೆ ಸುಂದರ ರವರು ತಂಬ್ ನೀಡಿ ಮಗನ ಆಧಾರ್ ಪಡೆದಿದ್ದರು.









ಆದರೆ ಸುಂದರ ರವರ ಆಧಾರ್ ಪಡೆಯಲು ಅವರ ಫಿಂಗರ್ ಮ್ಯಾಚ್ ಆಗದ ಹಿನ್ನೆಲೆಯಲ್ಲಿ ಸುಮಾರು 12 ವರ್ಷಗಳ ಅಲೆದಾಟದವನ್ನು ಮಾಡಿ ಸಿಗದಿದ್ದಾಗ ಅವರು ಕೊನೆಗೆ ರಿಯಾಜ್ ಕಟ್ಟೆಕ್ಕಾರ್ಸ್ ರವರ ಬಳಿ ಬಂದು ಎರಡು ಭಾರಿ ಬೆಂಗಳೂರು ಕೇಂದ್ರ ಕಚೇರಿಗೆ ತೆರಳಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಮೂಲಕ ಆಧಾರ್ ಕಾರ್ಡನ್ನು ಪಡೆದುಕ್ಕೊಂಡರು.
ಆದರೆ ತಂದೆಯ ಆಧಾರ್ ಕಾರ್ಡ್ ಬಂದ ಬಳಿಕ ಮೊದಲೇ ಇದ್ದ ಪುತ್ರ ರಂಜನ್ ಎಂ ಎಸ್ ರವರ ಆಧಾರ್ ಕಾರ್ಡ್ ಸ್ಥಗಿತಗೊಂಡಿತು.
ಬಳಿಕ ಅದಕ್ಕಾಗಿ ಮತ್ತೆ ಎರಡು ವರ್ಷಗಳ ಪ್ರಯತ್ನಪಟ್ಟು ಇದೀಗ ನೂತನ ಅರ್ಜಿ ಸಲ್ಲಿಸಿ ಟ್ರಸ್ಟ್ ಮೂಲಕವೇ ಹೊಸ ಆಧಾರ್ ಕಾರ್ಡ್ ಪಡೆಯುವಲ್ಲಿ ಆ ಕುಟುಂಬ ಯಶಸ್ವಿಯಾಗಿದೆ.
ಈ ಒಂದು ವ್ಯವಸ್ಥೆ ಸಿಗುವಲ್ಲಿ ರಿಯಾಜ್ ಕಟ್ಟೆಕಾರ್ ರವರ ಸತ ಪ್ರಯತ್ನದಿಂದ ಆಗಿದೆ ಎಂದು ಕುಟುಂಬದ ಸದಸ್ಯರು ಸುದ್ದಿಗೆ ತಿಳಿಸಿದ್ದಾರೆ.










