ಬಳ್ಪದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ.31 ರಂದು ನಡೆಯಿತು.
ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಸುಬ್ರಹ್ಮಣ್ಯ, ಗ್ರಾಮ ಪಂಚಾಯಿತಿ ಬಳ್ಪ,,ಇನ್ನರ್ವಿಲ್ ಕ್ಲಬ್ ಸುಬ್ರಹ್ಮಣ್ಯ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಮಣ್ಯ, ವಿಕ್ರಮ ಯುವಕ ಮಂಡಲ ಬಳ್ಪ, ಧರ್ಮಶಾಸ್ಥಾವು ಭಜನಾ ಮಂಡಳಿ ಬಳ್ಪ, ಇವುಗಳ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸುಮಾರು 100 ಜನ ಫಲಾನುಭವಿಗಳು ಪ್ರಯೋಜನ ಪಡೆದರು.









ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸುಬ್ರಹ್ಮಣ್ಯದ ಅಧ್ಯಕ್ಷರಾದ ಜಯಪ್ರಕಾಶ್ ಆರ್ ವಹಿಸಿದ್ದರು . ಶಿಬಿರದ ಉದ್ಘಾಟನೆಯನ್ನು ಊರಿನ ಹಿರಿಯರಾದ ಪಟೇಲ್ ಪುಟ್ಟಣ್ಣ ಗೌಡರು ದೀಪ ಬೆಳಗುವುದರ ಮೂಲಕ ನೆರವೇರಿಸಿದರು.

ಸಮಾರಂಭದಲ್ಲಿ ಅತಿಥಿಗಳಾಗಿ ರೋಟರಿ ಜಿಲ್ಲೆ3181 ಜೋನ್ 5 ಇದರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ, ಬಳ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪಾರ್ವತಿ ನೆಲ್ಯಡ್ಕ, ಇನ್ನರ್ವಿಲ್ ಕ್ಲಬ್ ಅಧ್ಯಕ್ಷರಾದ ವಿಮಲ ರಂಗಯ್ಯ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳ್ಪ ಇದರ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಉಮೇಶ್ ಬುಡೆಂಗಿ, ಬಳ್ಪ ಧರ್ಮಶಾಸ್ತ್ರವು ಭಜನಾ ಮಂಡಳಿಯ ಅಧ್ಯಕ್ಷರಾದ ಮುರಳಿದರ ಜತ್ತಿಲ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇದರ ಅಧ್ಯಕ್ಷರಾದ ಎಚ್.ಎಲ್. ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.











