ಮೊಗರ್ಪಣೆ: ಮೀಲಾದ್ ಸಮಿತಿ ವತಿಯಿಂದ ಮಸೀದಿ ಪರಿಸರ ಶ್ರಮದಾನ ಮೂಲಕ ಸ್ವಚ್ಛತೆ

0

ಸೆ 5 ರಂದು ನಡೆಯಲಿರುವ ಪೈಗಂಬರ್ ಮಹಮ್ಮದ್ ರವರ 15೦೦ ನೇ ಜನ್ಮದಿನಾಚರಣೆಯ ಅಂಗವಾಗಿ ಮೊಗರ್ಪಣೆ ಮಸೀದಿ ಆವರಣದಲ್ಲಿ ಮಿಲಾದ್ ಸಮಿತಿ ವತಿಯಿಂದ ಶ್ರಮದಾನ ಕಾರ್ಯಕ್ರಮ ನಡೆಯಿತು.

ಮೀಲಾದ್ ಸಮಿತಿ ಚೇರ್ಮೆನ್ ಹನೀಫ್ ಜಯನಗರ ಹಾಗೂ ಕಂನ್ವಿನರ್ ಅಶ್ರಫ್ ಸಂಗಮ್ ರವರ ನೇತೃತ್ವದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಮಂದಿ ಸದಸ್ಯರುಗಳು ಭಾಗವಹಿಸಿ ಮಸೀದಿ ಮತ್ತು ಮದ್ರಸಾ ಆವರಣ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು.

ಈದ್ ಮಿಲಾದ್ ಆಚರಣೆಯ ಅಂಗವಾಗಿ ಸೆ.೪ ರಂದು ನೂರು ಇಸ್ಲಾಂ ಹೈಯರ್ ಮದ್ರಸಾ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು
ಸುಮಾರು ೨೦೦ ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.ಸೆ. ೫ ರಂದು ಧ್ವಜಾರೋಹಣ ಹಾಗೂ ಆಕರ್ಷಕ ಮೀಲಾದ್ ಕಾಲ್ನಡಿಗೆ ಜಾಥಾ ಹಾಗೂ ಮೌಲೂದ್ ಪಾರಾಯಣ ಮತ್ತು ಅನ್ನದಾನ ಕಾರ್ಯಕ್ರಮಗಳು ನಡೆಯಲಿದೆ.

ಶ್ರಮದಾನ ಕಾರ್ಯಕ್ರಮದಲ್ಲಿ ಸ್ಥಳೀಯ ಮದ್ರಸಾ ಮುಅಲ್ಲಿಮ್ ವೃಂದದವರು ಪಾಲ್ಗೊಂಡು ಸಹಕರಿಸಿದರು.