








ಸೆಪ್ಟೆಂಬರ್ 1 ರಂದು ಸಾಂದೀಪನಿ ವಿದ್ಯಾ ಸಂಸ್ಥೆಯಲ್ಲಿ ಪುತ್ತೂರು ತಾಲೂಕು ಮಟ್ಟದ 17 ಕ್ಕಿಂತ ಕೆಳ ವಯಸ್ಸಿನ ರಿದಮಿಕ್ ಪ್ಯಾರ್ ಯೋಗಾಸನ ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಾದ ಜಾನ್ವಿ ಮಾಳ ಮತ್ತು ಆಸ್ಮಿ ಎಣ್ಮೂರು ರವರು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಇವರಿಗೆ ಶಾಲಾ ಯೋಗ ಶಿಕ್ಷಕಿ ಶಶಿಕಲಾ ಕೆ. ತರಭೇತಿಯನ್ನು ನೀಡಿದ್ದು ಇಬ್ಬರು ಮಕ್ಕಳು ಕೂಡ ಬೆಳ್ಳಾರೆ ಡ್ಯಾನ್ಸ್ & ಬೀಟ್ಸ್ ನೃತ್ಯ ಸಂಸ್ಥೆಯ ನೃತ್ಯಪಟುಗಳು, ಆಸ್ಮಿ ಎಣ್ಮೂರು ಮಹಾವಿಷ್ಣು ಮಕ್ಕಳ ಯಕ್ಷಗಾನ ಬಾಳಿಲ ಇದರ ವಿದ್ಯಾರ್ಥಿನಿ ಆಗಿದ್ದಾರೆ.










