ಸುಳ್ಯ ತಾಲೂಕು ಮೀಲಾದ್ ಸಮಿತಿ ಇದರ ಆಶ್ರಯದಲ್ಲಿ ಜರಗುವ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥ ಮತ್ತು ಪ್ರವಾದಿ ಸಂದೇಶ ಸಾರ್ವಜನಿಕ ಸಭಾ ಕಾರ್ಯಕ್ರಮದ ಕರಪತ್ರ ಬಿಡುಗಡೆ ಸಮಾರಂಭ ಆ ೩೧ ರಂದು ಗಾಂಧಿನಗರ ಮೀಲಾದ್ ಸಮಿತಿ ಕಛೇರಿಯಲ್ಲಿ ನಡೆಯಿತು.
ಪ್ರವಾದಿ ಮುಹಮ್ಮದ್ ರವರ ೧೫೦೦ ನೇ ಜನ್ಮದಿನಾಚರಣೆ ಅಂಗವಾಗಿ ದಫ್-ಸ್ಕೌಟ್ ಆಕರ್ಷಣೆಯೊಂದಿಗೆ ಬೃಹತ್ ಮೀಲಾದ್ ಕಾಲ್ನಡಿಗೆ ಜಾಥಾ ಸೆ ೧೩ ರಂದು ನಡೆಯಲಿದ್ದು
ಸಂಜೆ ೪ ಗಂಟೆಗೆ ಮೊಗರ್ಪಣೆ ಮಸೀದಿ ವಠಾರದಿಂದ ಆರಂಭಗೊಂಡು ಗಾಂಧಿನಗರದಲ್ಲಿ ಸಮಾರೋಪ ಗೊಳ್ಳಲಿದೆ. ಸಾರ್ವಜನಿಕ ಸಭಾ ಕಾರ್ಯಕ್ರಮ ಸಂಜೆ ೭ ಗಂಟೆಗೆ ಗಾಂಧಿನಗರದಲ್ಲಿ ನಡೆಯಲಿದ್ದು ಇದರ ಉದ್ಘಾಟನೆಯನ್ನು ಸಯ್ಯದ್ ಕುಂಞಿ ಕೋಯ ಸಅದಿ ತಂಙಳ್ ಸುಳ್ಯ ನೆರವೇರಿಸಲಿದ್ದಾರೆ.









ಸಯ್ಯಿದ್ ತಾಹಿರ್ ತಂಙಳ್ ಸುಳ್ಯ ದುವಾ ಮಾಡಲಿದ್ದು ಸಂದೇಶ ಭಾಷಣಕಾರರಾಗಿ ಎಸ್.ಎಂ ಬಶೀರ್ ಅಹ್ಮದ್ ಮಂಜೇಶ್ವರ,ಹುಸೈನ್ ಅಹ್ಸನಿ ಅಲ್ ಮುಹೀನಿ ಮೂರ್ನಾಡ್ ಹಾಗೂ ರಿಯಾಝ್ ಕಡಂಬು ರವರು ಭಾಗವಹಿಸಲಿದ್ದಾರೆ. ಮುಖ್ಯ ಪ್ರಭಾಷಣವನ್ನು ಖ್ಯಾತ ವಾಗ್ಮಿ ನವಾಝ್ ಮಾನ್ನಾನಿ ತಿರುವನಂತಪುರಂ ರವರು ಮಾಡಲಿದ್ದಾರೆ.
ಕರಪತ್ರ ಬಿಡುಗಡೆ ಸಂಧರ್ಭದಲ್ಲಿ ತಾಲೂಕು ಮೀಲಾದ್ ಸಮಿತಿ ಅಧ್ಯಕ್ಷರಾದ ಜುನೈದ್ ಎನ್ ಎ,ರಫೀಕ್ ಮಾಸ್ಟರ್, ಮಹಮ್ಮದ್ ಕುಕ್ಕುವಳ್ಳಿ, ಟಿ ಎಮ್ ಶಹೀದ್,ಕೆ ಎಂ ಮುಸ್ತಫಾ ಜನತಾ, ಉಮ್ಮರ್ ಕೆ ಎಸ್, ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೋ, ಅಝೀಝ್ ಸಂಗಮ್, ಉನೈಸ್ ಪರಾಜೆ, ಮೀರಝ್ ಸುಳ್ಯ, ಇಕ್ಬಾಲ್ ಸುಣ್ಣಮೂಲೆ,ಅಬ್ದುಲ್ ರಶೀದ್ ಜಟ್ಟಿಪಳ್ಳ, ಸುಹೈಲ್ ನಾವೂರು, ಖಾದರ್ ಸಂಗಮ್, ಆಶ್ರಫ್ ಕಲ್ಲುಮುಟ್ಲು, ಮೊದಲಾದವರು ಉಪಸ್ಥಿತರಿದ್ದರು.










