ಬೆಳ್ಳಾರೆ ಜ್ಞಾನದೀಪ ತರಬೇತಿ ಸಂಸ್ಥೆಯಿಂದ ತರಬೇತಿ ಪಡೆದ ಮೋಕ್ಷಾ ಎಂ ಕೆ ನವೋದಯ ಶಾಲೆಗೆ ಆಯ್ಕೆ

0

2024-25ನೇ ಸಾಲಿನಲ್ಲಿ ಜವಾಹರ್ ನವೋದಯ ವಿದ್ಯಾಲಯದ ಪ್ರವೇಶ ಪಡೆಯಲು ಮೂರನೇ ಸುತ್ತಿನಲ್ಲಿ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಮೋಕ್ಷಾ ಎಂ ಕೆ ಮುಡಿಪು ಪಿಎಂಶ್ರೀ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.

ಸುಳ್ಯ ತಾಲ್ಲೂಕು ಕೂತ್ಕುಂಜ ಗ್ರಾಮದ ಕುದ್ವ ಮಣಿಕುಮಾರ್ ಮತ್ತು ಸುಮಾ ದಂಪತಿಗಳ ಪುತ್ರಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮೋಕ್ಷಾ ಎಂ ಕೆ ನವೋದಯಕ್ಕೆ ಆಯ್ಕೆಯಾಗಿದ್ದಾರೆ.

ಈ ಮೂಲಕ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಇಲ್ಲಿ ತರಬೇತಿ ಪಡೆದ ಒಟ್ಟು 21 ವಿದ್ಯಾರ್ಥಿಗಳು ನವೋದಯ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಇದುವರೆಗೆ ಇಲ್ಲಿ ತರಬೇತಿ ಪಡೆದ ಒಟ್ಟು 206 ವಿದ್ಯಾರ್ಥಿಗಳು ನವೋದಯ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ.
ವರದಿ : ಉಮೇಶ್ ಮಣಿಕ್ಕಾರ