ಸುಳ್ಯ ರೈತ ಉತ್ಪಾದಕ ಕಂಪನಿಯಿಂದ ಅಡಿಕೆ ಖರೀದಿ ಆರಂಭ

0

ಸುಳ್ಯ ರೈತ ಉತ್ಪಾದಕ ಕಂಪನಿಯಿಂದ ಬೆಳ್ಳಾರೆ ಯಲ್ಲಿ ಆ.30ರಂದು ಅಡಿಕೆ ಖರೀದಿ ಕೇಂದ್ರ ಆರಂಭಗೊಂಡಿದ್ದು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಭಟ್ ಕುರುಂಬಡೇಳು ಇವರು ದೀಪ ಬೆಳಗಿಸಿ ಉದ್ಘಾಟಿಸಿ ರೈತರ ಆದಾಯವನ್ನು ಹೆಚ್ಚಿಸುವಲ್ಲಿ ರೈತ ಉತ್ಪಾದಕ ಕಂಪನಿಗಳ ಪಾತ್ರ ಪ್ರಾಮುಖ್ಯ. ಸುಳ್ಯ ರೈತ ಉತ್ಪಾದಕ ಕಂಪನಿ ಹಾಗೂ ಪಿಂಗಾರ ರೈತ ಉತ್ಪಾದಕ ಕಂಪನಿ ಅತ್ಯುತ್ತಮ ಕೆಲಸ ಮಾಡುತ್ತಿವೆ.ಸಹಕಾರಿ ಸಂಘಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳು ರೈತರ ಹಿತದೃಷ್ಟಿಯಿಂದ ಬೆಳೆಯಲೇಬೇಕು ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುವ ಎಂದು ತಿಳಿಸಿ ಶುಭ ಹಾರೈಸಿದರು

ಮುಖ್ಯ ಅತಿಥಿಗಳಾಗಿ ಪಿಂಗಾರ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರಾದ ರಾಮಕಿಶೋರ್ ಮಂಚಿ, ಮಹಿಳೆಯರ ವಿವಿಧೋದ್ದೇಶ ಸಹಕಾರಿ ಸಂಘ ಸುಬ್ರಮಣ್ಯ ಇದರ ಅಧ್ಯಕ್ಷರಾದ ಶ್ರೀಮತಿರಾಜೀವಿ ಆರ್‌ ರೈ ಹಾಗೂ ಕಟ್ಟಡದ ಮಾಲೀಕರು ಹಾಗೂ ಪ್ರಗತಿಪರ ಕೃಷಿಕರು ಆಗಿರುವ ಮುರಳೀಧರ ಎಸ್ ಪಿ ಕೆಮ್ಮಾರ ಇವರುಗಳು ಆಗಮಿಸಿದ್ದು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು
ಸುಳ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷರಾದ ವೀರಪ್ಪಗೌಡ ಕಣ್ಕಲ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕವಾಗಿ ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ತಿಳಿಸಿದರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಕೆ ರವರು ಧನ್ಯವಾದ ನೀಡಿದರು. ಕಾರ್ಯಕ್ರಮದಲ್ಲಿ ರಾಮಕೃಷ್ಣ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿಯ ನಿರ್ದೇಶಕರಾದ ದಯಾಕರ ಆಳ್ವ, ಪರಿವಾರ ಪಂಜ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ತೀರ್ಥಾನಂದ ಕೊಡಂಗಿರಿ ಉಪಾಧ್ಯಕ್ಷರಾದ ಕಾರ್ಯಪ್ಪ ಚಿದ್ಗಲ್ ಸ್ಥಳೀಯರಾದ ಮಹಾಬಲ ಗೌಡ ಸುನಿಲ್ ರೈ ಸಂಸ್ಥೆಯ ನಿರ್ದೇಶಕರುಗಳಾದ ರಾಮಕೃಷ್ಣ ಬೆಳ್ಳಾರೆ,ಸುರೇಶ್ ರೈ ಬಾಳಿಲ ಕುಶಾಲಪ್ಪ ಪೆರುವಾಜೆ, ಲೋಹಿತ್ ಕೊಡಿಯಾಲ, ಧರ್ಮಪಾಲ ಐವರ್ನಾಡ್ ವಿಜಯಕುಮಾರ್ ಎಂಡಿ ಮಡಪ್ಪಾಡಿ , ಜಯರಾಮ್ ಮುಂಡೋಲಿಮೂಲೆ ಅಜ್ಜಾವರ ಹಾಗೂ ಬೆಳ್ಳಾರೆ ಭಾಗದ ಸಂಸ್ಥೆಯ ಷೇರುದಾರರು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

ಪ್ರಸ್ತುತ ಪಿಂಗಾರ ರೈತ ಉತ್ಪಾದಕ ಕಂಪನಿಯ ಒಡಂಬಡಿಕೆಯೊಂದಿಗೆ ಪ್ರತಿ ವಾರ ಶನಿವಾರದಂದು ಮಾತ್ರ ಅಡಿಕೆ ಖರೀದಿ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ವಾರದ ಎಲ್ಲಾ ದಿನಗಳಲ್ಲೂ ಖರೀದಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ