ಕೊಲ್ಲಮೊಗ್ರು – ಹರಿಹರ ಪ್ರಾ.ಕೃ.ಪ.ಸ.ಸಂಘಕ್ಕೆ ಡಿಸಿಸಿ ಬ್ಯಾಂಕಿನಿಂದ ಅತ್ಯುತ್ತಮ ಸಹಕಾರಿ ಸಂಘ ಪ್ರೋತ್ಸಾಹಕ ಪ್ರಶಸ್ತಿ ಲಭಿಸಿದೆ.









ಮಂಗಳೂರಿನಲ್ಲಿ ನಡೆದ ಡಿಸಿಸಿ ಬ್ಯಾಂಕಿನ ಮಹಾಸಭೆಯಲ್ಲಿ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರಿಂದ .ಸಂಘದ ಅಧ್ಯಕ್ಷ ಡಾ.ಸೋಮಶೇಖರ್ ಕಟ್ಟೆಮನೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಳ್ಯಪ್ಪ ಗೌಡ ಅವರಿಗೆ ಪ್ರಶಸ್ತಿ ಹಸ್ತಾಂತರಿಸಿದರು.
ಸಂಘದ ಉಪಾಧ್ಯಕ್ಷ ಗಣೇಶ್ ಭಟ್ ಇಡ್ಯಡ್ಕ, ನಿರ್ದೇಶಕರಾದ ಶೇಷಪ್ಪ ಗೌಡ ಕಿರಿಭಾಗ, ಗೋಪಾಲಕೃಷ್ಣ, ಕಮಲಾಕ್ಷ ಮುಳ್ಳುಬಾಗಿಲು, ಶ್ರೀಮತಿ ವೇದಾವತಿ ಮುಳ್ಳುಬಾಗಿಲು, ಹಿಮ್ಮತ್ ಕೆ. ಸಿ, ರೇಗನ್ ಎಸ್. ಪಿ, ಡ್ಯಾನಿ ಯಲದಾಳು, ಶ್ರೀಮತಿ ಮೇನಕ, ಸಿಬ್ಬಂದಿಗಳಾದ ಶ್ರೀಮತಿ ತೀರ್ಥಕುಮಾರಿ, ಗೌರೀಶ್ ಮಲ್ಲಾಜೆ, ನಿವೃತ್ತ ಕಾರ್ಯನಿರ್ವಾಹಣಾಧಿಕಾರಿ ಅನಂತರಾಮ ಮಣಿಯಾನ ಮನೆ ಮತ್ತಿತರರು ಉಪಸ್ಥಿತರಿದ್ದರು










