ಶ್ರದ್ಧಾ ಕೇಂದ್ರಗಳ ಮೇಲೆ ಅವಹೇಳನ ನಡೆದಾಗ ಮೂಕ ಪ್ರೇಕ್ಷಕರಾಗಿರಬಾರದು : ಶಾಸಕಿ ಭಾಗೀರಥಿ ಮುರುಳ್ಯ
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡಿಸಿ ಧರ್ಮಸ್ಥಳ ಭಕ್ತಾದಿಗಳ ಬಳಗದ ವತಿಯಿಂದ ಸುಳ್ಯದಲ್ಲಿ ಹಕ್ಕೊತ್ತಾಯ ಸಭೆ ನಡೆಯುತ್ತಿದೆ. ಸಹಸ್ರಾರು ಭಕ್ತರು ಭಾಗವಹಿಸಿದ್ದಾರೆ.

ಸುಳ್ಯ ಶಾಸಕಿ ಭಾಗೇರಥಿ ಮುರುಳ್ಯ ಸಭೆಯನ್ನು ಉದ್ಧಾಟಿಸಿದರು. ಶ್ರದ್ಧಾ ಕೇಂದ್ರಗಳ ಮೇಲೆ ಅವಹೇಳನ ನಡೆದಾಗ ಮೂಕ ಪ್ರೇಕ್ಷಕರಾಗಿರಬಾರದು. ಸಮಾಜಕ್ಕೆ ನೂರಾರು ಉಪಯೋಗಿ ಸೇವೆ ಮಾಡಿದ ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ಪರ ನಿಲ್ಲುವುದು ಸಮಾಜದ ಕರ್ತವ್ಯ ಎಂದರು.









ಭಕ್ತಾದಿಗಳ ಬಳಗದ ಅಧ್ಯಕ್ಷ ಎನ್.ಎ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ನ.ಪಂ. ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರಧ್ವಾಜ್,ಎಂ.ಬಿ.ಸದಾಶಿವ, ಪಿ.ಸಿ.ಜಯರಾಂ, ಎಸ್.ಎನ್. ಮನ್ಮಥ, ಎಂ.ವೆಂಕಪ್ಪ ಗೌಡ, ರಾಜೇಶ್ ಶೆಟ್ಟಿ ಮೇನಾಲ, ಪಿ.ಕೆ. ಉಮೇಶ್, ಲೋಕನಾಥ್ ಅಮಚೂರು, ವಿಷ್ಣು ಕಿರಣ ಭಟ್ ನೀರಬಿದಿರೆ, ನಾರಾಯಣ ಕೇಕಡ್ಕ, ಕೃಷ್ಣ ಕಾಮತ್, ದೀಪಕ್ ಕುತ್ತಮೊಟ್ಟೆ, ಕೇಶವ ಕೊಳಲುಮೂಲೆ, ಮಧುಸೂಧನ್, ನಾಗಕುಮಾರ ಶೆಟ್ಟಿ, ಬಾಲಕೃಷ್ಣ ನಾಯ್ಕ್ ಅಜ್ಜಾವರ, ಮಲ್ಲೇಶ್ ಬೆಟ್ಟಂಪಾಡಿ, ಎ.ಕೆ.ಮಣಿಯಾಣಿ, ಐತ್ತಪ್ಪ ರೈ ಅಜ್ರಂಗಳ, ಮೊದಲಾದವರು ವೇದಿಕೆಯಲ್ಲಿದ್ದಾರೆ.

ಸವಿತಾ ಸಂದೇಶ್ ಪ್ರಾರ್ಥಿಸಿದರು. ಭಕ್ತಾದಿಗಳ ಬಳಗದ ಪ್ರಧಾನ ಕಾರ್ಯದರ್ಶಿ ಅಶೋಕ್ ಪ್ರಭು ಸ್ವಾಗತಿಸಿ ಪ್ರಸ್ತಾವನೆಗೈದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.











