ಕೆವಿಜಿ ಕಾನೂನು ಕಾಲೇಜಿನಲ್ಲಿ ಓಣಂ ಆಚರಣೆ

0


“ವಿವಿಧತೆಯಲ್ಲಿ ಏಕತೆಯನ್ನು ಸಾರುವ ಹಬ್ಬ ಓಣಂ “: ಅಕ್ಷಯ್ ಕೆ. ಸಿ.


ಸೆ. 11ರಂದು ಕೆವಿಜಿ ಕಾನೂನು ಕಾಲೇಜಿನಲ್ಲಿ ನಡೆದ ಓಣಂ ಆಚರಣೆ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ “ಓಣಂ ಹಬ್ಬವು ಸರ್ವಧರ್ಮೀಯರು ಆಚರಿಸುವ ಹಬ್ಬ. ಕೇರಳ ಮಾತ್ರವಲ್ಲದೆ, ಭಾರತದಾದ್ಯoತ, ವಿಶ್ವದೆಲ್ಲೆಡೆ ಆಚರಿಸುತ್ತಾರೆ. ಓಣಂ ಆಚರಣೆಯು ವಿವಿಧತೆಯಲ್ಲಿ ಎಕತೆಯನ್ನು ಬಿಂಬಿಸುತ್ತದೆ. ಎಲ್ಲರೂ ಒಗ್ಗೂಡಿ ಆಚರಿಸಿದಾಗ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ” ಎಂದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದರು ಓಣಂ ಹಬ್ಬದ ಶುಭಾಶಯ ಕೋರಿದರು. ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಕೆ.ವಿ. ದಾಮೋದರ ಗೌಡ, ಕಾಲೇಜಿನ ಪ್ರಾoಶುಪಾಲೆ ಶ್ರೀಮತಿ ಟೀನಾ ಎಚ್.ಎಸ್. ಶುಭಾಶಯದ ನುಡಿಗಳನ್ನಾಡಿದರು. ವಿದ್ಯಾರ್ಥಿನಿ ರೋಜಾ ಎ. ಕರೀಂ ಪ್ರಾರ್ಥಿಸಿದರು. ವಿದ್ಯಾರ್ಥಿನಿ ವೈಷ್ಣವಿ ಆರ್. ಪಿಳೈ ಸ್ವಾಗತಿಸಿ, ನಸೀಬಮೋಲ್ ವಂದಿಸಿದರು. ಕು. ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.