








ವಿಶ್ವ ಹಿಂದೂ ಪರಿಷದ್ ಬಜರಂಗದಳ ಮತ್ತು ಮಾತೃ ಶಕ್ತಿ ದುರ್ಗಾವಾಹಿನಿ ವಜ್ರಕಾಯ ಶಾಖೆ ಪದವು ಚೊಕ್ಕಾಡಿ ಸುಳ್ಯ ಪ್ರಖಂಡ
ಇವರ ವತಿಯಿಂದ ನಡೆಯುವ 10ನೇ ವರ್ಷದ ಗೋ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸೆ.28 ರಂದು ಪದವು ವಠಾರದಲ್ಲಿ
ಆಯುಧ ಪೂಜಾ ಕಾರ್ಯಕ್ರಮ ದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡದ ಕಾರ್ಯದರ್ಶಿ ನವೀನ್ ಎಲಿಮಲೆ, ಸಹ ಸಂಯೋಜಕ ವರ್ಷಿತ್ ಚೊಕ್ಕಾಡಿ, ಸನತ್ ಪದವು, ಘಟಕದ ಅಧ್ಯಕ್ಷ ವಿನಯ್ ಪಾಡಾಜೆ, ಕಾರ್ಯದರ್ಶಿ ಸುದರ್ಶನ್ ಪದವು,ಸಂಯೋಜಕ ಪುನೀತ್ ಸಂಕೇಶ, ಮಾತೃ ಶಕ್ತಿ ಪ್ರಮುಖರಾದ ಅನಿತಾ ಮಂಜುನಾಥ್ ಹಾಗೂ ಘಟಕದ ಎಲ್ಲ ಕಾರ್ಯಕರ್ತರು ಹಾಗೂ ಮಾತೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಆಮಂತ್ರಣ ಪತ್ರಿಗೆ ಬಿಡುಗಡೆಯ ಮುನ್ನ ಚೊಕ್ಕಾಡಿ ಶ್ರೀ ಉಳ್ಳಾಕುಲು ಸನ್ನಿಧಿಯಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.










