ಜಾಲ್ಸೂರಿನ ಎನ್.ಇ.ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಸಂದೀಪ್ ಬಿ.ಎಸ್.ರವರ ಸ್ಮೈಲ್ ವಿಜ್ ದಂತ ಚಿಕಿತ್ಸಾಲಯದ ಸಹಸಂಸ್ಥೆ
ಬೆಳ್ಳಾರೆಯ ಹೆಗ್ಡೆ ಸಂಕೀರ್ಣದಲ್ಲಿ ಅ.02 ರಂದು ಶುಭಾರಂಭಗೊಂಡಿತು. ಬೆಳಿಗ್ಗೆ ಗಣಹೋಮ ನಡೆಯಿತು.
ಪುರೋಹಿತ ನಾಗರಾಜ್ ಭಟ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.










ಸುಧಾಕರ ಬಿರ್ಮುಕಜೆ,ಉದಯಗೌರಿ ಬಿರ್ಮುಕಜೆ,ಮಮತ ಸುರೇಶ್ ಕುಮಾರ್ ನಡ್ಕ,ಸೌರವ್ ಬಿರ್ಮುಕಜೆ, ಸಂಜನಾ ಸಂದೀಪ್ ಬಿರ್ಮುಕಜೆ, ಕಟ್ಟಡ ಮಾಲಕ ಉಮೇಶ್ ಹೆಗ್ಡೆ, ಜಾಕೆ ಮಾಧವ ಗೌಡ,ಸಂತೋಷ್ ಜಾಕೆ,ವಾಸುದೇವ ನಡ್ಕ,ಬಾಲಕೃಷ್ಣ ಕೀಲಾಡಿ,ಪದ್ಮನಾಭ ಬೀಡು,ಧರ್ಮಪಾಲ ನಡ್ಕ,ರಾಧಾಕೃಷ್ಣ ಮಿತ್ತಮೂಲೆ, ಡಾ.ಜಯಪ್ರಸಾದ ಆನೆಕಾರ,ಡಾ.ಪ್ರಸನ್ನ ಕುಮಾರ್, ಡಾ.ಸುಕುಮಾರ್ ,ಚಂದ್ರಾವತಿ ಬಡ್ಡಡ್ಕ,ಡಾ.ರಂಗಯ್ಯ,ರಾಮಚಂದ್ರ ಪಲ್ಲತ್ತಡ್ಕ,ಬಿರ್ಮುಕಜೆ,ನಡ್ಕ ಕುಟುಂಬಸ್ಥರು ಹಾಗೂ ಪಂಜ ಲಯನ್ಸ್ ಕ್ಲಬ್ ಸದಸ್ಯರು ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇಲ್ಲಿ ಬಾಯಿಯ ಶಸ್ತ್ರ ಚಿಕಿತ್ಸೆ ಮತ್ತು ಹಲ್ಲು ಕೀಳುವುದು,ಹಲ್ಲಿನ ಗುಳಿ (ತೂತು)
ತುಂಬಿಸುವುದು,ಹಲ್ಲಿನ ಬೇರಿನ ಚಿಕಿತ್ಸೆ,ಹಲ್ಲು ಸ್ವಚ್ಛಗೊಳಿಸುವುದು,ವಕ್ರದಂತ ಚಿಕಿತ್ಸೆ (ಹಲ್ಲುಗಳಿಗೆ ಕ್ಲಿಪ್ ಹಾಕುವುದು)
ಮಕ್ಕಳ ಹಲ್ಲಿನ ಚಿಕಿತ್ಸೆ,ಕೃತಕ ಹಲ್ಲುಗಳ ಜೋಡನೆ,ಹಲ್ಲುಗಳಿಗೆ ಕ್ಯಾಪ್ ಹಾಕುವುದು,ವಸಡಿನ ಚಿಕಿತ್ಸೆ,ಹಲ್ಲಿನ ಇನ್ ಪ್ಲಾಂಟ್ಸ್, ನಗು ವಿನ್ಯಾಸ,ಹಲ್ಲುಗಳನ್ನು ಬಿಳಿ ಮಾಡುವುದು,ಮುಖದ ಸೌಂದರ್ಯ ವರ್ಧಕ ಶಸ್ತ್ರ ಚಿಕಿತ್ಸೆ ಮುಂತಾದ ಸೌಲಭ್ಯಗಳು ದೊರೆಯುತ್ತದೆ.










