ಸುಳ್ಯ ರೋಟರಿ ಶಾಲೆಗೆ ಕ್ಯಾಂಪ್ಕೋ ಸಂಸ್ಥೆಯಿಂದ 1 ಲಕ್ಷ ಸಹಾಯಧನ

0

ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲರವರ ವಿಶೇಷ ಪ್ರಯತ್ನ

ಸುಳ್ಯ ರೋಟರಿ ವಿದ್ಯಾಸಂಸ್ಥೆಗೆ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲರವರ ವಿಶೇಷ ಪ್ರಯತ್ನದಿಂದ ರೂ. 1,00,000 (ಒಂದು ಲಕ್ಷ) ಮೊತ್ತದ ಧನಸಹಾಯ ದೊರೆತಿದೆ.


ಈ ಮೊತ್ತವನ್ನು ಶಾಲೆಯ ಮಹಿಳಾ ಶೌಚಾಲಯ ನಿರ್ಮಾಣಕ್ಕಾಗಿ ನೀಡಲಾಗಿದೆ. ಕ್ಯಾಂಪ್ಕೋ ಸಂಸ್ಥೆಯ ಈ ಸಹಾಯದಿಂದ ವಿದ್ಯಾರ್ಥಿನಿಯರಿಗೆ ಸುಸಜ್ಜಿತ ಮತ್ತು ಸ್ವಚ್ಛ ಶೌಚಾಲಯದ ಸೌಲಭ್ಯ ಲಭ್ಯವಾಗಲಿದೆ.


ಕ್ಯಾಂಪ್ಕೋ ಸಂಸ್ಥೆಯಂತಹ ಸಾಮಾಜಿಕ ಬದ್ಧತೆಯ ಕಂಪನಿಗಳು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತಿರುವ ಸಹಕಾರವು ನಿಜಕ್ಕೂ ಪ್ರೇರಣಾದಾಯಕ. ಈ ಧನಸಹಾಯದಿಂದ ಶಾಲೆಯ ಮೂಲಸೌಕರ್ಯ ಮತ್ತಷ್ಟು ಬಲಗೊಂಡಿದ್ದು, ವಿದ್ಯಾರ್ಥಿಗಳ ಆರೋಗ್ಯ ಹಾಗೂ ಹಿತಕ್ಕಾಗಿ ಬಹುಮುಖ್ಯವಾದ ಹೆಜ್ಜೆ ಇಟ್ಟಿದೆ.