
ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಇದರ ಹಿರಿಯ ವಿದ್ಯಾರ್ಥಿ ಸಂಘದಿಂದ ಶಾಲಾ ವಠಾರದಲ್ಲಿ ಸುಸಜ್ಜಿತ ಇಂಟರ್ಲಾಕ್ ಅಳವಡಿಕೆ, ಉತ್ತಮ ಗುಣಮಟ್ಟದ ಮಾಡು ನಿರ್ಮಾಣದಿಂದ ನಿರ್ಮಿಸಲ್ಪಟ್ಟ ನೂತನ ವಾಹನ ಪಾರ್ಕಿಂಗ್ ಹಸ್ತಾಂತರ ಕಾರ್ಯಕ್ರಮ ಡಿ. 15 ರಂದು ನಡೆಯಿತು.

ಹಿರಿಯ ವಿದ್ಯಾರ್ಥಿ ಸಂಘದಿಂದ ಕ್ರಿಯಾ ಯೋಜನೆಗೆ ತಂದಂತಹ ನಾಲ್ಕು ಲಕ್ಷ ರೂಪಾಯಿಗಳ ಅನುದಾನದ ಕಾಮಗಾರಿಯಲ್ಲಿ ನೂತನ ವಾಹನ ಪಾರ್ಕಿಂಗ್ ಒಂದಾಗಿದೆ.
ಜೂನಿಯರ್ ಕಾಲೇಜಿನ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಸವಣೂರು ಸೀತಾರಾಮ ರೈ ರವರು ನೂತನ ವಾಹನ ಪಾರ್ಕಿಂಗ್ ಕಟ್ಟಡವನ್ನು ಉದ್ಘಾಟಿಸಿದರು.








ಈ ಸಂದರ್ಭದಲ್ಲಿ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೆ ಎಂ ಮುಸ್ತಫ ಜನತಾ, ಕೋಶಾಧಿಕಾರಿ ಅಶೋಕ್ ಪ್ರಭು, ಸದಸ್ಯರುಗಳಾದ ಕೆ ಗೋಕುಲ್ ದಾಸ್, ಹಿರಿಯರಾದ ಬಾಪು ಸಾಹೇಬ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ಉಪಾಧ್ಯಕ್ಷರಾದ ಶ್ರೀಮತಿ ಡಾ ವೀಣಾ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಜುಳಾ ಬಡಿಗೇರ್, ಉಪಾಧ್ಯಕ್ಷ ಹಸೈನಾರ್ ಜಯನಗರ, ಪ್ರಾಂಶುಪಾಲರಾದ ಮೋಹನ್ ಗೌಡ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ, ಹಿರಿಯ ವಿದ್ಯಾರ್ಥಿ ಗೋಪಾಲ್ ನಾಯರ್, ನಿವೃತ್ತ ದೈಹಿಕ ಶಿಕ್ಷಕ ನಟರಾಜ್, ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕ ಸಂಘದ ಸದಸ್ಯರುಗಳು,ಶಾಲಾ ಕಾಲೇಜಿನ ಶಿಕ್ಷಕರು ಹಾಗೂ ಉಪನ್ಯಾಸಕ ವೃಂದದವರು, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಯೋಜನೆಗಳ ಬಗ್ಗೆ ಮಾತನಾಡಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ ರವರು ‘ಹೈಸ್ಕೂಲ್ ಆವರಣದಲ್ಲಿದ್ದ ಸ್ಟೇಜ್ ನ ಪುನರ್ ನಿರ್ಮಾಣ,ಶಾಲಾ ಮೈದಾನದಲ್ಲಿ ಮಕ್ಕಳ ವ್ಯಾಯಾಮಕ್ಕೆ ಜಿಮ್ನಾಸ್ಟಿಕ್ ಬಾರ್ ಗಳ ಅಳವಡಿಕೆ,ಶಾಲಾ ಆವರಣದಲ್ಲಿ ಸುಮಾರು 60 ಅಡಿ ಉದ್ದದ ಸುಸಜ್ಜಿತ ವಾಹನ ನಿಲ್ದಾಣ ನಿರ್ಮಾಣ,ಶಾಲಾ ಉತ್ತರ ಭಾಗದಲ್ಲಿ ಕಾಂಪೌಂಡ್ ನಿರ್ಮಾಣ,
ಶಾಲಾ ಆವರಣದಲ್ಲಿದ್ದ ಮರಕ್ಕೆ ಕಟ್ಟೆ ನಿರ್ಮಾಣ,ಈ ಯೋಜನೆ ಅಂದಾಜು ನಾಲ್ಕುವರೆ ಲಕ್ಷದ ಕೆಲಸ ಕಾರ್ಯಗಳನ್ನು ಹಿರಿಯ ವಿದ್ಯಾರ್ಥಿ ಸಂಘ ಮಾಡಿದೆ ಎಂದು ತಿಳಿಸಿದರು.










