ಕಳಂಜ : ಸೂರೆಂಗಿಯಲ್ಲಿ ಮನೆಗೆ ಸಿಡಿಲು ಬಡಿದು ಅಪಾರ ಹಾನಿ

0

ಕಳಂಜ ಗ್ರಾಮಸ ಸೂರೆಂಗಿ ದೇಜಪ್ಪ ಗೌಡರ ಮನೆಗೆ ನಿನ್ನೆ ರಾತ್ರಿ ಸಿಡಿಲು ಬಡಿದು ಅಪಾರ ಹಾನಿಯುಂಟಾಗಿದೆ.


ಸುಮಾರು 8.45ರ ಹೊತ್ತಿಗೆ ಸಿಡಿಲು ಬಡಿದಿದೆ. ಮನೆಯ ಗೋಡೆ ಅಲ್ಲಲ್ಲಿ ಬಿರುಕು ಬಿಟ್ಟಿದೆ, ಮೇಲ್ಛಾವಣಿಗೆ ಹಾನಿಯಾಗಿರುವುದಲ್ಲದೆ ವಿದ್ಯುತ್ ವಯರಿಂಗ್, ಸ್ವಚ್ ಬೋರ್ಡ್ ಗೆ ಹಾನಿಯಾಗಿರುವುದಲ್ಲದೆ, ಮನೆಯ ಸಾಮಾಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದಾಗಿ ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಮೂರು ಮಂದಿ ಅಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.