ಎಣ್ಮೂರು ಐವತ್ತೊಕ್ಲು ಕೇಂದ್ರ ರಹ್ಮಾನಿಯಾ ಜುಮ್ಮಾ ಮಸೀದಿ ಇದರ ಆಡಳಿತ ಸಮಿತಿಯ ಮಹಾಸಭೆ ಮೇ 16ರಂದು ಮಸೀದಿ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಆಡಳಿತ ಸಮಿತಿಯ ಅಧ್ಯಕ್ಷ ಟಿ ಎಸ್ ಸುಲೈಮಾನ್ ವಹಿಸಿದ್ದರು. ಕಳೆದ ಸಾಲಿನ ವರದಿ ಪತ್ರವನ್ನು ಸಮಿತಿ ಉಪಾಧ್ಯಕ್ಷ ಸಿ ಎಂ ರಫೀಕ್ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಹಮೀದ್ ಮರಕ್ಕಡ ಲೆಕ್ಕಪತ್ರವನ್ನು ಮಂಡಿಸಿದರು. ಬಳಿಕ ಮಸೀದಿ ಅಭಿವೃದ್ಧಿಯ ಕುರಿತು ಚರ್ಚೆಗಳು ನಡೆಯಿತು. ಈ ಸಂದರ್ಭದಲ್ಲಿ ನೂತನ ಸಮಿತಿಯ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಎರಡು ದಿನಗಳ ಬಳಿಕ ನಡೆದ ಸದಸ್ಯರ ಸಭೆಯಲ್ಲಿ ನೂತನ ಸಾಲಿನ ಅಧ್ಯಕ್ಷರಾಗಿ ಇಸ್ಮಾಯಿಲ್ ಪಡ್ಪಿನಂಗಡಿ, ಉಪಾದ್ಯಕ್ಷ ಬಶೀರ್ ಸಿ ಎಂ, ಪ್ರಧಾನ ಕಾರ್ಯದರ್ಶಿ ರಝಾಕ್ ಕೊಳ್ತಂಗರೆ, ಕಾರ್ಯದರ್ಶಿಗಳಾಗಿ ಮಹಮ್ಮದ್ ನೇಮನಕಜೆ, ರಹೀಂ ಮರಕ್ಕಡ, ಕೋಶಾದಿಕಾರಿ ದಾವೂದ್ ಮುಚ್ಚಿಲ, ನಿರ್ದೇಶಕರುಗಳಾಗಿ ಕೆ ಬಿ ಅಬ್ದುಲ್ ಖಾದರ್, ಉಮ್ಮರಬ್ಬ ಸಿ ಎಂ, ಆದಂಕುಂಞಿ ಅಡಿಬಾಯಿ, ಹಂಝ ಪಳ್ಳಿಮನೆ, ಆದಂ ಪಡ್ಪಿನಂಗಡಿ, ಕೆ ಸಿ ಸುಲೈಮಾನ್ ಮುಸ್ಲಿಯಾರ್, ಅಝೀಝ್ ಮುಸ್ಲಿಯಾರ್ ಕಲ್ಲೇರಿ, ಝಬೈರ್ ನಿಡ್ಮಾರ್, ನಿಝಾರ್ ಕೆ ಬಿ, ಇವರನ್ನು ಆಯ್ಕೆ ಮಾಡಲಾಯಿತು.
Home ಪ್ರಚಲಿತ ಸುದ್ದಿ ಎಣ್ಮೂರು ಐವತ್ತೊಕ್ಲು ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷರಾಗಿ ಇಸ್ಮಾಯಿಲ್ ಪಡ್ಪಿನಂಗಡಿ ಆಯ್ಕೆ