ಸುಳ್ಯದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಿವಾನಿ ಇಂಟರ್ ನ್ಯಾಷನಲ್ ಗ್ರೂಪ್ ರವರ ವತಿಯಿಂದ ವಿಕಲಚೇತನ ಉದ್ಯೋಗಿಗಳಿಂದ ನಡೆಸಲ್ಪಡುವ ತಂತ್ರಜ್ಞರ ನೂತನ ಕಚೇರಿ “ಬೆಳಕು” ಮೇ.28 ರಂದು ಸುಳ್ಯದ ಜೂನಿಯರ್ ಕಾಲೇಜ್ ರಸ್ತೆಯ ದಾಮಿನಿ ಮೋಟಾರ್ಸ್ ಇದರ ನೆಲ ಅಂತಸ್ತಿನಲ್ಲಿ ಉದ್ಘಾಟನೆ ಗೊಳ್ಳಲಿರುವುದು.
ಕಿವಾನಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಸತ್ಯಮೂರ್ತಿ ಬೆಂಗಳೂರು ಕಚೇರಿಯನ್ನು ಉದ್ಘಾಟಿಸಲಿರುವರು. ಸುಳ್ಯ ಸಾಂದೀಪ ವಿಶೇಷ ಶಾಲೆಯ ಸ್ಥಾಪಕರಾದ ಎಂ.ಬಿ ಸದಾಶಿವ ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಡಬ ಪೋಲಿಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ, ಸುಳ್ಯ ನೋಟರಿ ಹಿರಿಯ ನ್ಯಾಯವಾದಿ ನಳಿನ್ ಕುಮಾರ್ ಕೋಡ್ತುಗುಳಿ,ಸಮಾಜ ಸೇವಕ ಶೈಲೇಶ್ ಅಂಬೆಕಲ್ಲು,ಕಿವಾನಿ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರಜನಿಕಾಂತ್ ಉಮ್ಮಡ್ಕ ರವರು ಉಪಸ್ಥಿತರಿರುವರು.
ಕಿವಾನಿ ಸಂಸ್ಥೆಯು ವಿಕಲಚೇತನರಿಗೆ ಸ್ಪೂರ್ತಿ ನೀಡಿ ಅವರಲ್ಲಿರುವ ಛಲ ಸಾಧನೆ ಹಾಗೂ ಧೃಢ ಗುರಿಯನ್ನು ಹೊರ ಚೆಲ್ಲುವಂತೆ ಪ್ರೋತ್ಸಾಹಿಸಿ ಸಮಾಜದಲ್ಲಿ ಸರ್ವ ಸಾಮಾನ್ಯರಂತೆ ಬದುಕಿ ಸಮಾಜಕ್ಕೆ ಅವರಿಂದ ಕೊಡುಗೆ ಸಿಗುವಂತಾಗಬೇಕು. ವಿಕಲಚೇತನರ ಬಾಳಿಗೆ ಬೆಳಕಾಗುವಂತಾಗಬೇಕೆಂಬ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ಬೆಳಕು ಹೆಸರಿನ ಕಚೇರಿ ತೆರೆಯುವ ಸದುದ್ದೇಶ ಹೊಂದಿದೆ ಎಂದು ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರಜನಿಕಾಂತ್ ಉಮ್ಮಡ್ಕ ರವರು ತಿಳಿಸಿದರು.