ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ, ಕಾರಿನಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ ಜಾಲ್ಸೂರು ಗ್ರಾಮದ ಬೈದರಕೊಳಂಜಿ ಎಂಬಲ್ಲಿ ಮೇ.25ರಂದು ರಾತ್ರಿ ಸಂಭವಿಸಿದೆ.
ಕೇರಳದ ಅಡೂರಿನವರದು ಎನ್ನಲಾದ ಕಾರು ಅಡೂರಿನಿಂದ ಜಾಲ್ಸೂರಿಗೆ ಬರುತ್ತಿದ್ದ ವೇಳೆ ಬೈದರಕೊಳಂಜಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮುಖ್ಯರಸ್ತೆಯ ಪಕ್ಕ ಇದ್ದ ರಸ್ತೆಗೆ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಓರ್ವ ಮಹಿಳೆ ಸೇರಿದಂತೆ ನಾಲ್ವರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಅಟೋರಿಕ್ಷಾ ಹಾಗೂ 108 ಅಂಬ್ಯುಲೆನ್ಸ್ ವಾಹನದ ಮೂಲಕ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿರುವುದಾಗಿ ತಿಳಿದುಬಂದಿದೆ.