ನಗರ ಮಧ್ಯದಲ್ಲೊಂದು ಹಸಿರು ಲೋಕ

0

ಕೃಷಿ ಕಾಯಕವನ್ನೇ ದಿನಚರಿಯನ್ನಾಗಿಸಿರುವ ದಿನಕರ

✍️ ಶರೀಫ್ ಜಟ್ಟಿಪ್ಪಳ್ಳ

ಸುಳ್ಯ ನಗರ ಮಧ್ಯದಲ್ಲೇ ಇರುವ ಬೆಲೆ ಬಾಳುವ ಪುಟ್ಟ ಜಾಗ ವಿದೆ. ಇಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿ ಯಶಸ್ಸು ಕಂಡ ವ್ಯಕ್ತಿ ಜಟ್ಟಿಪಳ್ಳದ ಕಾನತ್ತಿಲ ಮನೆಯ ದಿನಕರ.

ಹಲವಾರು ವರ್ಷಗಳಿಂದ ತನ್ನ ಮನೆಯ ಸಮೀಪದ ಸಣ್ಣ ಸ್ಥಳದಲ್ಲಿ ತರಕಾರಿ, ಹಣ್ಣುಗಳು, ಮಲ್ಲಿಗೆ ಕೃಷಿ ಹೀಗೆ ವಿವಿಧ ರೀತಿಯ ಕೃಷಿಗಳನ್ನು ಮಾಡುತ್ತಿದ್ದಾರೆ. ಮನೆಗೆ ಬೇಕಾಗುವ ತರಕಾರಿ ಹಣ್ಣು ಗಳನ್ನು ತೆಗೆದಿಟ್ಟು ಉಳಿದ ಕೃಷಿ ಉತ್ಪನ್ನಗಳನ್ನು ತನ್ನ ಮನೆಯ ಸಮೀಪದಲ್ಲಿರುವ ತನ್ನದೇ ಅಂಗಡಿಯಲ್ಲಿ ಮಾರಾಟ ಮಾಡುತ್ತಾರೆ.

ದಿನಕರರು ಬೆಳೆಸಿದ ತರಕಾರಿಗಳಿಗೆ ಉತ್ತಮ ಬೇಡಿಕೆಯೂ ಇದೆ. ಕಾರಣ ಅವರು ಬೆಳೆಯುವ ಕೃಷಿಗೆ ಯಾವುದೇ ಕೆಮಿಕಲ್ ಗೊಬ್ಬರವನ್ನು ಬಳಸದೆ ಬರಿ ಸಾವಯವ ಗೊಬ್ಬರದಿಂದ ಕೃಷಿ ಬೆಳೆಯುತ್ತಾರೆ.

ಹತ್ತು ಹದಿನೈದು ಸೆಂಟ್ಸ್ ಸ್ಥಳದಲ್ಲಿ ಇಪ್ಪತ್ತಕ್ಕೂ ಹೆಚ್ಚು ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ನಮ್ಮ ಊರಿನಲ್ಲಿ ವಿರಳವಾಗಿ ಬೆಳೆಯುವ ಆಲೂಗಡ್ಡೆ, ಬೀನ್ಸ್, ಮೂಲಂಗಿ ಸೇರಿದಂತೆ ಅನೇಕ ತರಕಾರಿ ಇವರ ಪುಟ್ಟ ತೋಟದಲ್ಲಿ ಬೆಳೆಯುತ್ತಾರೆ. ಬಸಳೆ, ತೊಂಡೆಕಾಯಿಯ ಚಪ್ಪರದಡಿಯಲ್ಲಿ ಬೇರೆ ಬೇರೆ ತರಕಾರಿ ಗಿಡಗಳನ್ನು ಬೆಳೆಯುತ್ತಾರೆ.

ಕೃಷಿ ಕೆಲಸಕ್ಕೆ ಮೊದಲ ಆದ್ಯತೆ ನೀಡುವ ದಿನಕರರು ಬೆಳಿಗ್ಗೆಯಿಂದಲೇ ಹೆಚ್ಚು ಸಮಯವನ್ನು ಸಣ್ಣ ಪುಟ್ಟ ಕೃಷಿ ತೋಟದಲ್ಲಿ ಕಳೆಯುತ್ತಾರೆ. ಕೃಷಿಗೆ ಬೇಕಾದ ಸಾವಯವ ಗೊಬ್ಬರಕ್ಕಾಗಿ ದನಗಳನ್ನು ಸಾಕುತ್ತಾರೆ. ಪ್ರತಿದಿನ ಪಕ್ಕದಲ್ಲಿ ಇರುವ ಹೊಟೇಲ್ ಗಳಿಂದ ಗಂಜಿನೀರು, ಇನ್ನಿತರ ಹುಲ್ಲುಗಳನ್ನು ತಂದು ದನಕರುಗಳಿಗೆ ಹಾಕುತ್ತಾರೆ. ಅದರೊಂದಿಗೆ ಮಲ್ಲಿಗೆ ಕೃಷಿ ಮಾಡಿ ಮಲ್ಲಿಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಹೆಚ್ಚಿನವರು ಮಲ್ಲಿಗೆ ಅವರ ಮನೆಗೆ ಬಂದು ಖರೀದಿ ಮಾಡುತ್ತಾರೆ.


ಒಟ್ಟಾರೆ ಸುಳ್ಯ ನಗರದಲ್ಲಿ ಅತೀ ಕಡಿಮೆ ಭೂಮಿಯಲ್ಲಿ ಒಳ್ಳೆಯ ಕೃಷಿಯನ್ನು ಯಶಸ್ಸು ಕಂಡ ರೈತ ದಿನಕರ ಕಾನತ್ತಿಲ.