ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನ, ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ

0

ವಿವಿಧ ಧಾರ್ಮಿಕ ಹಾಗೂ ಸಭಾ ಕಾರ್ಯಕ್ರಮ, ಶಾಸಕರಿಗೆ ಸನ್ಮಾನ

ಗ್ರಾಮಸ್ಥರು ಸಹಕಾರ ನೀಡಿದಲ್ಲಿ ಮುರುಳ್ಯ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವೆ : ಭಾಗೀರಥಿ ಮುರುಳ್ಯ

ಮುರುಳ್ಯದ ಪೂದೆಯಲ್ಲಿ ಅವಳಿ ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿದ್ದು, ಜೂನ್ 2ರಂದು ಕ್ಷೇತ್ರದಲ್ಲಿ ಪ್ರಧಾನ ಅರ್ಚಕ ವೇದಮೂರ್ತಿ ಸುಬ್ರಹ್ಮಣ್ಯ ಉಪಾಧ್ಯಾಯ ಕಲ್ಪಡರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು.


ಬೆಳಿಗ್ಗೆ ಗಣಪತಿ ಹವನ, ರಾತ್ರಿ ದುರ್ಗ ನಮಸ್ಕಾರ ಪೂಜೆ, ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ ನಡೆದು ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಶ್ರೀ ಮಹಾವಿಷ್ಣು ದೇವಸ್ಥಾನದ ದೇವಸ್ಥಾನ ಸಮಿತಿ ಅಧ್ಯಕ್ಷ ಭುವನೇಶ್ವರ ಪೂದೆ ಸಭಾಧ್ಯಕ್ಷತೆ ವಹಿಸಿ, ಜೀರ್ಣೋದ್ಧಾರಕ್ಕೆ ಆರ್ಥಿಕ ಸಹಾಯಕ್ಕೆ ಭಕ್ತಾದಿಗಳು ಕೈಜೋಡಿಸಿಕೊಂಡು ಶೀಘ್ರದಲ್ಲಿ ಬ್ರಹ್ಮಕಲಶೋತ್ಸವ ಮಾಡುವಲ್ಲಿ ಯಶಸ್ವಿಯಾಗಬೇಕೆಂದು ಹೇಳಿದರು.

ಶಾಸಕಿ ಭಾಗೀರಥಿ ಮುರುಳ್ಯರವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಶಾಸಕಿ ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ಸಹಕಾರ ನೀಡಿದ ಹಾಗೆಯೇ ಗ್ರಾಮದಲ್ಲಿ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಕಾರ ನೀಡಿದ್ದಲ್ಲಿ ಮುರುಳ್ಯ ಗ್ರಾಮವನ್ನು ತಾಲೂಕಲ್ಲಿ ಮಾದರಿ ಗ್ರಾಮವನ್ನಾಗಿಸಿ ಶಾಸಕರ ನೆಲೆಯಲ್ಲಿ ಮಾಡುವೆ ಎಂದು ಹೇಳಿದರು. ಶಾಸಕರನ್ನು ದೇವಳದ ಸೇವಾ ಸಮಿತಿಯ ವತಿಯಿಂದ ಪ್ರತ್ಯೇಕ ಸನ್ಮಾನಿಸಿದರು.
ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯರು ಜೀರ್ಣೋದ್ಧಾರ ಹಾಗೂ ದೇವರ ಕಾರ್ಯಗಳು ನಡೆಯಬೇಕಾದ ಕಾರ್ಯಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಪ್ರಸ್ತಾವನೆಗೈದ್ದರು.


ಪುಟ್ಟಣ್ಣ ಆಚಾರ್ಯ ಪೂದೆಯವರು ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಉಳಿದ ಕೆಲಸ ಕಾರ್ಯಗಳು, ಇನ್ನಿತರ ಅಡೆತಡೆಗಳನ್ನು ಶಾಸಕರಿಗೆ ವಿವರಿಸಿದರು.

ಅರ್ಚಕ ಅನಂತ ಪದ್ಮನಾಭ ಸುಬ್ರಹ್ಮಣ್ಯ ಭಟ್ ಪೂದೆ, ಗಣಪತಿ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ರೋಹಿತ್ ಹೆದ್ದಾರಿ, ಪುಟ್ಟಣ್ಣ ಆಚಾರ್ಯ ಪೂದೆ, ಮುರುಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕು. ಜಾನಕಿ ಮುರುಳ್ಯ, ಸದಸ್ಯ ಮೋನಪ್ಪ ಗೌಡ ಆಲೇಕಿ, ಶಿಲಾವತಿ ಗೋಳ್ತಿಲ, ಗಣಪತಿ ಮಲ್ಲಿಕಾರ್ಜುನ ದೇವಸ್ಥಾನದ ದೇವಸ್ಥಾನ ಸಮಿತಿ ಅಧ್ಯಕ್ಷ ಪದ್ಮನಾಭ ಪೂದೆ, ಅನುಪ್ ಬಿಳಿಮಲೆ ಶೇಖರ್ ಸಾಲಿಯಾನ್ ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಶಿಕ್ಷಕಿ ಕುಸುಮಾವತಿ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗೀತಾ ಪೂದೆ ವಂದಿಸಿದರು.