ಸಂಪಾಜೆ ನದಿಯಿಂದ ಹೂಳೆತ್ತುವ ಪ್ರಕ್ರಿಯೆ ಇಂದಿನಿಂದ ಆರಂಭ

0

ಸಂಪಾಜೆ ಗ್ರಾಮದ ಬಹು ಮುಖ್ಯ ಬೇಡಿಕೆಯಾದ ಹೂಳೆತ್ತುವ ಸಮಸ್ಯೆ ಬಗ್ಗೆ ನಿರಂತರ ಹೋರಾಟ ನಡೆದು ಕೊನೆಗೂ ಸಮಸ್ಯೆ ಪರಿಹಾರದ ಭಾಗವಾಗಿ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಹೇಮಂತ್ ರವರು ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಸ್ಥಳಕ್ಕೆ ಭೇಟಿ ಕಾಮಗಾರಿ ಆರಂಭದ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ.

ಜೂ.7 ರಿಂದ ನಾವು ಕೆಲಸ ಆರಂಭಿಸುತ್ತೇವೆ. ಎಲ್ಲಿ ಸಮಸ್ಯೆ ಇದೆಯೋ ಆ ಪ್ರದೇಶದ ಹೂಳೆತ್ತಲಾಗುವುದು ಎಂದು ಇಂಜಿನಿಯರ್ ಹೇಮಂತ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್, ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ, ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಜಗದೀಶ್ ರೈ, ಎಸ್. ಕೆ. ಹನೀಫ್, ಹೋರಾಟ ಸಮಿತಿಯ ರವಿಶಂಕರ್ ಭಟ್, ಪದ್ಮಯ್ಯ ಗೌಡ, ನಾಗೇಶ್ ಪಿ. ಆರ್, ಕಿಶೋರ್ ಕುಮಾರ್ ಸ್ಪಾಟ್ ಕಂಪ್ಯೂಟರ್, ಕುಂಞಿಕಣ್ಣಾ ಮನಿಯಣಿ, ಪ್ರಶಾಂತ್ ವಿ. ವಿ. ಅಶ್ರಫ್ ಎಚ್. ಎ ಮಂಜುನಾಥ್ ಅಬೂಬಕ್ಕರ್. ಎಂ. ಸಿ ಮೊದಲದವರು ಉಪಸ್ಥಿತರಿದ್ದರು.