2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಮರುಮೌಲ್ಯಮಾಪನದಲ್ಲಿ ಎಲಿಮಲೆ ಜ್ಞಾನದೀಪ ಶಾಲೆಯ ಶೃತಿ ಎಸ್ ಗೆ 10 ಸೇರ್ಪಡೆಯಾಗಿದೆ.
ಈಕೆಗೆ 10ನೇ ತರಗತಿಯಲ್ಲಿ ಒಟ್ಟು 559 ಅಂಕ ಬಂದಿತ್ತು. ನಿರೀಕ್ಷೆಯ ಅಂಕ ಬಂದಿರದ ಕಾರಣ ಈಕೆ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಳು. ಇದರಲ್ಲಿ ಕನ್ನಡದಲ್ಲಿ 7 ಅಂಕ ಮತ್ತು ಸಮಾಜ ವಿಜ್ಞಾನದಲ್ಲಿ 3 ಅಂಕಗಳು ಬಂದು ಈಕೆಯ ಒಟ್ಟು ಅಂಕ 569(ಶೇ.91.04) ಆಗಿದೆ.
ಈಕೆ ಮರ್ಕಂಜ ಗ್ರಾಮದ ಸಂಕೇಶ ವಸಂತರಾಮ ಮತ್ತು ಸಾವಿತ್ರಿ ದಂಪತಿಗಳ ಪುತ್ರಿ.