ಬಾಳಿಲ: ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

0

ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ 2023 ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ. 10ರಂದು ಜರುಗಿತು. ವಿದ್ಯಾಬೋಧಿನಿ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಎನ್ ವೆಂಕಟರಮಣ ಭಟ್ ಅಧ್ಯಕ್ಷತೆ ವಹಿಸಿದರು.

ಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶಿವರಾಮ ಶಾಸ್ತ್ರಿ ಎಂ‌.ಎಸ್ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅಭಿನಂದನಾ ಮಾತುಗಳನ್ನು ಆಡಿದರು.

ಬಾಳಿಲ ಗ್ರಾಮ ಪಂಚಾಯತ್ ಸದಸ್ಯ ತಾರಾನಾಥ ಮಡಿವಾಳ, ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷರಾದ ಶಿವಪ್ರಸಾದ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು .ಉಪಾಧ್ಯಕ್ಷರಾದ ಶ್ರೀಮತಿ ತ್ರಿವೇಣಿ ಕೆ ಶುಭ ಹಾರೈಸಿದರು. ವಿದ್ಯಾಬೋಧಿನೀ ಎಜುಕೇಶನ್ ಸೊಸೈಟಿ ಬಾಳಿಲ ಇದರ ಸಂಚಾಲಕರಾದ ಪಿ.ಜಿ.ಎಸ್.ಎನ್ ಪ್ರಸಾದ್, ಕೊಶಾಧಿಕಾರಿ ರಾಧಾಕೃಷ್ಣರಾವ್ ಯು ವೇದಿಕೆಯಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಶಾಲಾ ಪ್ರಥಮ ಸ್ಥಾನಿ ಕುಮಾರಿ ಇಂಚರ ವೇದಿಕೆಯಲ್ಲಿ ಉಪಸ್ಥಿತರಿದ್ದು, ಗೌರವವನ್ನು ಸ್ವೀಕರಿಸಿ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಲೋಚನ್ ಮತ್ತು ಜನಕ ಕೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 16 ವಿದ್ಯಾರ್ಥಿಗಳನ್ನು ಹೂ ನೀಡಿ ಶಾಲು ಹೊಂದಿಸಿ ಸ್ಮರಣಿಕೆ ಮತ್ತು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಕೃತ ಭಾಷಾ ಶಿಕ್ಷಕರಾದ ವೆಂಕಟೇಶ್ ಕುಮಾರ್ ಉಳುವಾನ ನಿರ್ವಹಿಸಿದರು. ಬೇರೆ ಬೇರೆ ದಾನಿಗಳು ನೀಡಿದ ದತ್ತಿ ನಿಧಿ ನಗದು ಬಹುಮಾನವನ್ನು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಇದರ ನಿರ್ವಹಣೆಯನ್ನು ಸಹ ಶಿಕ್ಷಕಿ ಶ್ರೀಮತಿ ಸಹನಾ ಬಿಬಿ ನಿರ್ವಹಿಸಿದರು. ಮುಖ್ಯ ಶಿಕ್ಷಕರಾದ ಯಶೋಧರ ನಾರಾಲು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಸಹ ಶಿಕ್ಷಕ ಉದಯಕುಮಾರ್ ರೈ ವಂದಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಕು. ವೇದಿನಿ ಮತ್ತು ಕು. ಪ್ರತೀಕ್ಷಾ ಕಾರ್ಯಕ್ರಮದ ನಿರೂಪಿಸಿದರು. ಪೋಷಕರು, ಹಿರಿಯ ವಿದ್ಯಾರ್ಥಿಗಳು, ಆಡಳಿತ ಮಂಡಳಿಯ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮ ಪಂಚಾಯತು ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.