ಯಕ್ಷಗಾನದ ಖ್ಯಾತ ಹಾಸ್ಯಕಲಾವಿದ ಮಹೇಶ್ ಮಣಿಯಾಣಿ ದೊಡ್ಡತೋಟ ಇಂದು ವಿದೇಶಕ್ಕೆ

0

ಜೂ.15ರಿಂದ ಯುರೋಪ್ ದೇಶದಲ್ಲಿ ಯಕ್ಷಗಾನ ಅಭಿಯಾನದಲ್ಲಿ ಭಾಗಿ

ವಿವಿಧ ದೇಶಗಳಲ್ಲಿ ಯಕ್ಷಗಾನದ ತಾಳ ಝೇಂಕರಿಸಲಿರುವ ಯಕ್ಷ ಪೌಂಡೇಶನ್

ಯಕ್ಷಗಾನದ ಖ್ಯಾತ ಹಾಸ್ಯಕಲಾವಿದ ಮಹೇಶ್ ಮಣಿಯಾಣಿ ದೊಡ್ಡತೋಟ ಇವರು ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಜೂನ್ 15 ರಿಂದ ಯುರೋಪ್ ನಲ್ಲಿ ನಡೆಯಲಿರುವ ಯಕ್ಷಗಾನ ಅಭಿಯಾನದಲ್ಲಿ ಭಾಗವಹಿಸುವ ಅವಕಾಶ ಒದಗಿದೆ. ಇಂದು ಮಂಗಳೂರಿನಿಂದ ವಿಮಾನದ ಮೂಲಕ ಯೂರೋಪ್ ರಾಷ್ಟ್ರಕ್ಕೆ ತೆರಳಲಿದ್ದಾರೆ. ಜೂ.15ರಿಂದ ವಿವಿಧ ದೇಶಗಳಲ್ಲಿ ಕರಾವಳಿಯ ಪ್ರಸಿದ್ಧ ಯಕ್ಷಗಾನ ವಿದೇಶದಲ್ಲಿ ಝೇಂಕರಿಸಲಿದೆ.

ಯಕ್ಷಗಾನ ಅಭಿಯಾನದಲ್ಲಿ ರಾಜ ವೇಷ, ಬಣ್ಣದ ವೇಷ, ಪಗಡಿ ವೇಷ, ಸ್ತ್ರೀ ವೇಷ, ಹಾಸ್ಯ ವೇಷಗಳು ರಾರಾಜಿಸಲಿದೆ ಎಂದು ತಿಳಿದು ಬಂದಿದೆ.

ಯುರೋಪ್ ದೇಶದ ವಿವಿಧ ಭಾಗಗಳಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರದರ್ಶನಗೊಳ್ಳಲಿದ್ದು, ಬಳಿಕ
ಲಂಡನ್, ಮಿಡ್ಲ್ಯಾಂಡ್, ದುರಾಅಮ್, ಲೀಡ್ಸ್, ಎಡಿನ್ ಬಗ್೯, ಸ್ಕಾಟ್ಲಂಡ್ ಮೊದಲಾದ ಕಡೆಗಳಲ್ಲಿಯೂ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಆಗೋಸ್ಟ್ ತಿಂಗಳಲ್ಲಿ ಫ್ರಾನ್ಸ್, ಪ್ಯಾರಿಸ್, ಫ್ರಾಂಕ್ ಫಟ್೯, ಮುನಿಚ್, ಜರ್ಮನಿ, ಬಿಲ್ಲಿಂಗಾಮ್, ದುರಾಹಮ್ ಮೊದಲಾದ ಕಡೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಪಣಂಬೂರು ವಾಸು ಐತಾಳ್ ಯುಎಸ್ ಎ ಇವರ ನೇತೃತ್ವದಲ್ಲಿ ಪಟ್ಲ ಸತೀಶ್ ಶೆಟ್ಟಿ ಭಾಗವತರೊಂದಿಗೆ ಪ್ರೋ ಎಂ.ಎಲ್. ಸಾಮಗ, ಪದ್ಮನಾಭ ಉಪಾಧ್ಯಾಯ, ಚೈತನ್ಯ ಕೃಷ್ಣ, ಪದ್ಯಾಣ ಚಂದ್ರಶೇಖರ ಪೂಜಾರಿ ಧರ್ಮಸ್ಥಳ, ಮಹೇಶ್ ಮಣಿಯಾಣಿ ದೊಡ್ಡತೋಟ, ಪ್ರಶಾಂತ್ ನೆಲ್ಯಾಡಿ, ಮೋಹನ್ ಪೂಜಾರಿ ಬೆಳ್ಳಿಪಾಡಿ ಕಲಾವಿದರು ಭಾಗವಹಿಸಲಿದ್ದಾರೆ.

ಪ್ರತಿಷ್ಠಿತ ಕನ್ನಡಿಗರು ಯು.ಕೆ. ಸಂಸ್ಥೆಯ ಆಹ್ವಾನ ಹಾಗೂ ದೇವಿಕಾ ಡ್ಯಾನ್ಸ್ ಥಿಯೇಟರ್ ಇವರ ಆಶ್ರಯದಲ್ಲಿ ಯುರೋಪ್ ನಲ್ಲಿ ಯಕ್ಷಗಾನ ಅಭಿಯಾನ ಸಂಪನ್ನಗೊಳ್ಳಲಿದ.

ಯಕ್ಷಗಾನ ಪ್ರದರ್ಶನ ಅಲ್ಲದೆ ದುರಾಹಮ್ ಮತ್ತು ಲೀಡ್ಸ್ ಮಹಾವಿದ್ಯಾಲಯಗಳಲ್ಲಿ ಯಕ್ಷಗಾನದ ಶಿಬಿರಗಳು ನಡೆಯಲಿದೆ ಎಂದು ತಿಳಿದು ಬಂದಿದೆ. ಮಹೇಶ್ ಮಣಿಯಾಣಿಯವರು‌ ಮೂಲತಃ ನೆಲ್ಲೂರು ಕೆಮ್ರಾಜೆಯವರು.

ವಿವಿಧ ಪ್ರಸಿದ್ಧ ಮೇಳಗಳಲ್ಲಿ‌ ಕಲಾವಿದರಾಗಿ ಗುರುತಿಸಿಕೊಂಡವರು. ಮತ್ತು ನೂರಾರು ಕಡೆಗಳಲ್ಲಿ ಅತಿಥಿ ಕಲಾವಿದರಾಗಿಯೂ ತನ್ನ ಛಾಪನ್ನು ಬಿತ್ತರಿಸಿದ್ದಾರೆ.