ಸಂಪಾಜೆ: ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಹೂಳೆತ್ತುವ ಕಾಮಗಾರಿ ಪರಿಶೀಲನೆ

0

ನಾಲ್ಕು ಹಿಟಾಚಿ ಹಾಗೂ ಒಂದು ಜೆಸಿಬಿ ಮೂಲಕ ನಿರಂತರವಾಗಿ ನಡೆಯುತ್ತಿರುವ ಕಾಮಗಾರಿ

ಸಂಪಾಜೆ ಗ್ರಾಮದ ಜನರ ಬಹುಬೇಡಿಕೆಯಾದ ನದಿಯಿಂದ ಹೂಳೆತ್ತುವ ಕಾಮಗಾರಿ ಹಿಟಾಚಿಗಳ ಮೂಲಕ ಕಳೆದೊಂದು ವಾರದಿಂದ ನಡೆಯುತ್ತಿದ್ದು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಜೂ. 16ರಂದು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.

ಪ್ರಾರಂಭದಲ್ಲಿ ಒಂದು ಹಿಟಾಚಿಯ ಮೂಲಕ ಕಾಮಗಾರಿ ಪ್ರಾರಂಭಗೊಂಡಿತ್ತು. ಬಳಿಕ ಜನರ ಬೇಡಿಕೆಯಂತೆ ನದಿಯ ಎರಡೂ ಭಾಗದಿಂದ ಹೂಳೆತ್ತುವ ಪ್ರಕ್ರಿಯೆ ನಡೆದಿದ್ದು, ಇದೀಗ ನಾಲ್ಕು ಹಿಟಾಚಿ ಹಾಗೂ ಒಂದು ಜೆಸಿಬಿಯ ಮೂಲಕ ಹೂಳೆತ್ತುವ ಕೆಲಸ ನಿರಂತರವಾಗಿ ಸಾಗುತ್ತಿರುವುದಾಗಿ ತಿಳಿದುಬಂದಿದೆ.