ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸು ದಾಖಲು

0

ಶೀಘ್ರವೇ ಜಿಲ್ಲಾ ಕಾಂಗ್ರೆಸ್ ಮಧ್ಯಪ್ರವೇಶ ಮಾಡಿ ಅನಪೇಕ್ಷಿತ ವಿದ್ಯಮಾನಗಳನ್ನು ಸರಿಪಡಿಸಲು ಎಂ. ವೆಂಕಪ್ಪ ಗೌಡ ಆಗ್ರಹ

ಚುನಾವಣೆಯಲ್ಲಿ ಸ್ಪರ್ಧಿಸಿರುವವರು ಮತ್ತು ರಾಜಕಾರಣದಲ್ಲಿ ತೊಡಗಿಸಿಕೊಂಡವರು ಒಂದು ವೇಳೆ ಅವರು ಚುನಾವಣೆಗೆ ನಿಂತಾಗ ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ಮುಂದೆ ಅಂತಹ ತಪ್ಪುಗಳು ಆಗಬಾರದೆಂದು ಕಾರ್ಯಕರ್ತರ ಬೆನ್ನು ತಟ್ಟಿ ಪಕ್ಷವನ್ನು ಬೆಳೆಸುವುದು ಒಬ್ಬ ಬುದ್ದಿವಂತ ರಾಜಕಾರಣಿಯ ಲಕ್ಷಣ.


ಆದರೆ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು ಪಕ್ಷದ ಒಳಗೆ ತೀರ್ಮಾನಮಾಡಬೇಕಾದ ಸಂಗತಿಗಳನ್ನು ಬೀದಿಗೆ ತಂದು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಮೇಲೆಯೇ ದ್ವೇಷ ಮತ್ತು ಅಸೂಯೆಯಿಂದ ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳಲ್ಲಿ ದೂರು, ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿ ಅವರ ಮೇಲೆ ಹಠ ಸಾಧನೆ ಮಾದುವುದು ರಾಜಕಾರಣದಲ್ಲಿ ಭವಿಷ್ಯವನ್ನು ಬಯಸುವ ಯಾವುದೇ ಪ್ರಬುದ್ಧ ರಾಜಕಾರಣಿಯ ಲಕ್ಷಣವಲ್ಲ.


ಸುಳ್ಯ ಬ್ಲಾಕ್ ಕಾಂಗ್ರೆಸ್ ನಲ್ಲಿ ನಡೆಯುವ  ಈ ವಿದ್ಯಾಮಾನಗಳು ನಾವು ಕಳೆದ 30 ವರ್ಷಗಳಿಂದ ಬಿಜೆಪಿ ವಿರುದ್ಧ ಸೆಣಸಾಡಿ ಪಕ್ಷವನ್ನು ಕಟ್ಟಿದ ನಮ್ಮಂತಹ ಹಿರಿಯರ ಮನಸ್ಸಿಗೆ ಅತೀವ ನೋವು ತಂದಿದೆ.


ಹಾಗಾಗಿ ನಾನು ಜಿಲ್ಲಾ ಕಾಂಗ್ರೆಸ್ ನವರಲ್ಲಿ ವಿನಂತಿ ಮಾಡುವುದೇನೆಂದರೆ ಆದಷ್ಟು ಶೀಘ್ರದಲ್ಲಿ ಸುಳ್ಯದಲ್ಲಿ ಪಕ್ಷದ ಒಳಗೆ ನಡೆಯುತ್ತಿರುವ ಅನಪೇಕ್ಷಿತ ವಿದ್ಯಾಮಾನಗಳನ್ನು ಸರಿಪಡಿಸಿಕೊಡಲು ಮಧ್ಯಪ್ರವೇಶ ಮಾಡುವಂತೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ವೆಂಕಪ್ಪ ಗೌಡ ಆಗ್ರಹಿಸಿದ್ದಾರೆ.