ಸರಕಾರದ ಗೃಹ ಜ್ಯೋತಿ ಯೋಜನೆಯ ಇಲಾಖಾ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ

0

ಕರ್ನಾಟಕ ರಾಜ್ಯ ಘೋಷಿಸಿದ ಗೃಹ ಜ್ಯೋತಿ ಯೊಜನೆ ಎರಡು ದಿನಗಳಲ್ಲಿ ಜಾರಿಗೆ ಬರಲಿದೆ. ಕಂದಾಯ ಇಲಾಖೆಯ ಪೋಡಿ ದುರಸ್ತಿ ಕಾರ್ಯ ಮತ್ತು ಪ್ಲಾಟಿಂಗ್ ದುರಸ್ತಿ ಕಾರ್ಯ ತಾಲೂಕಿನಾದ್ಯಂತ ಇನ್ನೂ ಬಾಕಿ ಇರುವ ಕಾರಣ ಗ್ರಾಮ ಪಂಚಾಯಿತ್ ನಲ್ಲಿ ಮೃತರಾದ ಮನೆಯ ಮಾಲಿಕತ್ವದ ಬದಲಾವಣೆಗೆ ಕೃಷಿ ಜಮೀನನ್ನು ವಾಸದ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿ 9/11 ಮಾಡಲು ವಿಳಂಬ ಲಾಗುತ್ತಿದೆ, ಗ್ರಾಮೀಣ ಭಾಗದ ವಿದ್ಯುತ್ ಗ್ರಾಹಕರು ವಿದ್ಯುತ್ ಆರ್ ಆರ್ ನಂಬರ್ ಗೆ ಮಾಲಿಕತ್ವ ಬದಲಾವಣೆಗೆ ಗ್ರಾಮ ಪಂಚಾಯತ್ ನಿರಾಕ್ಷೇಪಣಾ ಪತ್ರ ಕೇಳುವ ಕಾರಣ, ಮೇಲಿನ ಕಂದಾಯ ಇಲಾಖೆಯ ತಾಂತ್ರಿಕ ಸಮಸ್ಯೆಯಿಂದ ತಾಲೂಕಿನಾದ್ಯಂತ ಕೆಲವರು ಸದರಿ ಗೃಹ ಜ್ಯೋತಿ ಯೊಜನೆಯಿಂದ ವಂಚಿತರಾಗುವ ಸಂಭವ ವಿರುವ ಕಾರಣ ಗ್ರಾಮ ಪಂಚಾಯತ್ ಗಳು ಇಂತಹ ಪ್ರಕರಣಗಳಲ್ಲಿ ತಾತ್ಕಾಲಿಕವಾಗಿ ಫಲಾನುಭವಿಗಳಿಂದ ಮ್ರತರಾಗಿರುವ ಕಟ್ಟಡ ಮಾಲೀಕರ ಮರಣ ಪ್ರಮಾಣ ಪತ್ರ ಹಾಗೂ ವಾರಿಸು ಹಕ್ಕುಗಳ ಬಗ್ಗೆ ಸೂಕ್ತ ದಾಖಲೆಪಡೆದು ಮೆಸ್ಕಾಂ ಇಲಾಖಾ ಉದ್ದೇಶಕ್ಕಾಗಿ ಮಾತ್ರ ನಿರಾಕ್ಷೇಪಣಾ ಪತ್ರ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್ ಮಂಗಳೂರು ಇವರಿಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ ರವರ ನೇತೃತ್ವದಲ್ಲಿ ವಿನಂತಿಸಲಾಯಿತು.


ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ, ಅಮರಮೂಡ್ನೂರು ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಚೂಂತಾರು, ಕಾಂಗ್ರೆಸ್ ಪಕ್ಷದ ವಕ್ತಾರ ನಂದರಾಜ ಸಂಕೇಶ, ಎನ್ ಎಸ್ ಯು ಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಕೀರ್ತನ್ ಕೊಡಪಾಲ ಉಪಸ್ಥಿತರಿದ್ದರು.