ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗೆ ಬೆಸ್ಟ್ ಬಿನ್ ಕೊಡುಗೆಯ ಹಸ್ತಾಂತರ

0

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಇವರ ಆಶ್ರಯದಲ್ಲಿ ರೋಟರಿ ಬೆಂಗಳೂರು ಮಹಾಲಕ್ಷ್ಮಿ ಸೆಂಟರ್ ಇವರ ಸಹಯೋಗದಲ್ಲಿ ಆರೋಗ್ಯಧಾಮ ಪೀಪಲ್ ಟ್ರಸ್ಟ್ ಮತ್ತು ರೋಟರಿ ಕ್ಲಬ್ ಸುಬ್ರಮಣ್ಯ ಇವುಗಳ ನೇತೃತ್ವದಲ್ಲಿ ಬೆಂಗಳೂರು ರೋಟರಿ ಕ್ಲಬ್ ನವರು ನೀಡಿದ ಬೆಸ್ಟ್ ಬಿನ್ ಹಸ್ತಾಂತರ ಕಾರ್ಯಕ್ರಮವು ಜೂ.18 ಸುಬ್ರಹ್ಮಣ್ಯ ಗ್ರಾಮ ಪಂಚಾಯಿತನ ರಾಜೀವ್ ಗಾಂಧಿ ಸೇವಾ ಕೇಂದ್ರ ಸಭಾಭವನ ದಲ್ಲಿ ನಡೆಯಿತು.

            

ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತ ಗುಂಡಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲೆಯ ಪೂರ್ವ ರಾಜ್ಯಪಾಲ ಡಾl ಎಸ್ ನಾಗೇಂದ್ರ, ರೋಟರಿ ಬೆಂಗಳೂರು ಮಹಾಲಕ್ಷ್ಮಿ ಸೆಂಟರ್ ನ ಅಧ್ಯಕ್ಷ ಸಂದೀಪ್, ನಿಯೋಜಿತ ಅಧ್ಯಕ್ಷ ಪ್ರಮೋದ್ ಎಸ್ ವಿ, ಪ್ರಾಜೆಕ್ಟ್ ಕೋ ಆರ್ಡಿನೇಟರ್ ರೋ. ಶಿವಾನಂದ, ಕ್ಲಬ್ ಅಡ್ವೈಸರ್ ಮನೋಹರ, ಮಹೇಂದ್ರ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ್ ಎಣ್ಣೆ ಮಜಲ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಕಾಶ್, ಆರೋಗ್ಯಧಾಮ ಪೀಪಲ್ ಟ್ರಸ್ಟ್ ಕಾರ್ಯದರ್ಶಿ ದಿನೇಶ್ ಅತ್ಯಾಡಿ, ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಡಿ, ಸದಸ್ಯರುಗಳಾದ ವೆಂಕಟೇಶ್ ಎಚ್ ಎಲ್, ಗಿರೀಶ್ ಆಚಾರ್ಯ, ಭವ್ಯ, ಸುಜಾತ, ನಾರಾಯಣ ಅಗ್ರಹಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಬೆಂಗಳೂರು ರೋಟರಿ ಅಧ್ಯಕ್ಷ ಸಂದೀಪ್, ಪ್ರೋಗ್ರಾಮ್ ಕಾರ್ಡಿನೇಟರ್ ಶಿವಾನಂದ, ಹಾಗೂ ಮಂಜುನಾಥ್ ಅವರುಗಳನ್ನ ಗೌರವಿಸಲಾಯಿತು. ಸುಮಾರು 80,000 ಸಾವಿರ ರೂಪಾಯಿಯ 50 ಡಸ್ಟ್ ಬಿನ್ ಗಳನ್ನ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಗೆ ಕೊಡುಗೆಯಾಗಿ ನೀಡಿದ್ದರು. ಸುಬ್ರಹ್ಮಣ್ಯ ರೋಟರಿ ಅಧ್ಯಕ್ಷ ಗೋಪಾಲ್ ಎಣ್ಣೆ ಮಜಲ್ ಸ್ವಾಗತಿಸಿದರು. ಪಿಡಿಓ ಆಕಾಶ್ ಪ್ರಸ್ತಾವನೆಗೆದರು. ರೋಟರಿ ಸದಸ್ಯ ಸುಬ್ರಹ್ಮಣ್ಯ ಅತ್ಯಾಡಿ ವಂದಿಸಿದರು. ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ವಿಶ್ವನಾಥ ನಡುತೋಟ ಅಧ್ಯಕ್ಷ ಕಾರ್ಯಕ್ರಮ ನಿರೂಪಿಸಿದರು.