ಕಲ್ಲಪಳ್ಳಿ ಎನ್.ಎಸ್. ಶಿಬಿರದ ಉದ್ಘಾಟನೆ

0

ಲಂಚ ಭ್ರಷ್ಟಾಚಾರ ವಿರೋಧ ಪ್ರತಿಜ್ಞೆ ಸ್ವೀಕರಿಸಿದ ಶಿಬಿರಾರ್ಥಿಗಳು, ಗಣ್ಯರು

ಜೂ. 18ರಂದು ಉದ್ಘಾಟನೆಗೊಂಡು ಜೂ. 25ರ ತನಕ ಕಲ್ಲಪಳ್ಳಿಯಲ್ಲಿ ನಡೆಯಲಿರುವ ಎನ್.ಎಂ.ಸಿ ಯ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ಅತಿಥಿಗಳು, ಶಿಬಿರಾರ್ಥಿಗಳು ಮತ್ತು ಊರವರು ಲಂಚ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಸ್ವೀಕರಿಸಿದರು.

ಸುದ್ದಿ ಜನಾಂದೋಲನ ವೇದಿಕೆಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದವೇದಿಕೆಯಲ್ಲಿ ಎ.ಓ.ಎಲ್.ಇ ಕಾರ್ಯದರ್ಶಿ ಕೆ.ವಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ರುದ್ರಕುಮಾರ್ ಎಂ.ಎಂ, ಪ್ರಗತಿಪರ ಕೃಷಿಕ ಶ್ರೀಕಾಂತ್ ಗೋಳ್ವಲ್ಕರ್, ನ್ಯಾಯವಾದಿ ಎ.ಸಿ‌. ನಂದನ್, ಸ್ವಾಗತ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಪೆರುಮುಂಡ, ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಘದ ಸ್ಥಾಪಕ ಸದಸ್ಯ ಬಾಲಚಂದ್ರ ಪಿ.ಎ, ಸಂಘದ ಅಧ್ಯಕ್ಷ ಸೃಜಿತ್ ಪೆರುಮುಂಡ, ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜುಳಾ ಗೋಪಾಲ್, ಸಂಘದ ಸ್ಥಾಪಕ ಅಧ್ಯಕ್ಷ ಪಿ.ಕೆ. ಬಾಲಚಂದ್ರ, ಎನ್.ಎಸ್.ಎಸ್ ಘಟಕ 2ರ ಯೋಜನಾಧಿಕಾರಿ ಸಂಜೀವ ಕುದ್ಪಾಜೆ ಎನ್.ಎಸ್.ಎಸ್ ಘಟಕ 1ರ ಯೋಜನಾಧಿಕಾರಿ ಶ್ರೀಮತಿ ಚಿತ್ರಲೇಖ ಕೆ.ಎಸ್ ಉಪಸ್ಥಿತರಿದ್ದರು.

ಸಭೆಯಲ್ಲಿ ಶಿಬಿರಾರ್ಥಿಗಳು, ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸಂಘದ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಗ್ರಾಮಸ್ಥರು ಪ್ರತಿಜ್ಞೆ ಮಾಡಿದರು. ಘಟಕದ ನಾಯಕಿ ನಿಶ್ಮ. ಡಿ.ಸಿ ಘೋಷಣೆಯನ್ನು ಕೂಗಿದರು. ಶಿಬಿರಾರ್ಥಿ ಗಾನ ಬಿ.ಡಿ ಸುದ್ದಿ ಜನಾಂದೋಲನ ಬಗ್ಗೆ ವಿವರಿಸಿದರು.