ರಸ್ತೆ ಒತ್ತುವರಿ ಮಾಡಿ ಮನೆ, ಕಾಂಪೌಂಡ್ ಕಟ್ಟಿದವರಿಗೆ ಪಂಚಾಯತ್‌ನಿಂದ ನೋಟೀಸ್

0

ಕ್ರಮಕೈಗೊಳ್ಳಲು ನ.ಪಂ. ಸದಸ್ಯರ ಒತ್ತಾಯ

ನಗರ ವ್ಯಾಪ್ತಿಯಲ್ಲಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆ, ಕಾಂಪೌಂಡ್ ಕಟ್ಟಲಾಗುತ್ತಿದ್ದು ಮಳೆ ನೀರು ರಸ್ತೆಯಲ್ಲೇ ಹರಿಯಲು ಪ್ರಮುಖ ಕಾರಣ. ಆದ್ದರಿಂದ ಸುಳ್ಯ ನಗರದ ೨೦ ವಾರ್ಡ್‌ಗಳಲ್ಲಿಯೂ ನ.ಪಂ. ಅಧಿಕಾರಿಗಳು ನೊಡಿಕೊಂಡು ರಸ್ತೆ ಒತ್ತುವರಿ ಮಾಡಿದವರಿಗೆ ನೋಟೀಸ್ ಮಾಡಿ ತೆರವು ಮಾಡಿಸಿಕೊಳ್ಳಬೇಕು. ನ.ಪಂ. ಜನಪ್ರತಿನಿಧಿಗಳಾಗಿ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ನ.ಪಂ. ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ ಹಾಗೂ ವಿನಯ ಕುಮಾರ್ ಕಂದಡ್ಕ ಹೇಳಿದ್ದಾರೆ.


ಜೂ.೨೦ರಂದು ನ.ಪಂ. ಸಭಾಂಗಣದಲ್ಲಿ ತಹಶೀಲ್ದಾರ್ ಹಾಗೂ ನ.ಪಂ. ಆಡಳಿತಾಧಿಕಾರಿಯಾಗಿರುವ ಜಿ.ಮಂಜುನಾಥರ ನೇತೃತ್ವದಲ್ಲಿ ನಡೆದ ಪ್ರಾಕೃತಿಕ ವಿಕೋಪದ ಮುಂಜಾಗ್ರತಾ ಸಭೆಯಲ್ಲಿ ಅವರು ಈ ಆಗ್ರಹ ಮಾಡಿದರು.
ವಿಷಯ ಪ್ರಸ್ತಾಪಿಸಿದ ವೆಂಕಪ್ಪ ಗೌಡರು, ಚರಂಡಿ ಸ್ವಚ್ಛ ಮಾಡಿಲ್ಲ. ಮಳೆ ನೀರೆಲ್ಲ ರಸ್ತೆಯಲ್ಲೇ ಹರಿಯುತ್ತಿದೆ. ಎಂದು ವಿವರ ನೀಡಿದರಲ್ಲದೇ ರಸ್ತೆಯಲ್ಲೇ ಕಂಪೌಂಡ್ ಇದೆ ಯಾಕೆ ಅಧಿಕಾರಿಗಳು ಸುಮ್ಮನಿದ್ದೀರಿ” ಎಂದು ಪ್ರಶ್ನಿಸಿದರು. ”ರಸ್ತೆಯನ್ನು ಬಳಸಿಕೊಂಡು ಮನೆ, ಕಂಪೌಂಡ್ ಮಾಡಿದವರ ಪಟ್ಟಿ ನನ್ನಲ್ಲಿ ಇದೆ. ಎಲ್ಲರಿಗೂ ನೊಟೀಸ್ ಕೊಟ್ಟಿದ್ದೇವೆ ಯಾಕೆ ರಸ್ತೆ ಬಳಸಿ ಕೊಂಡಿದ್ದೀರಿ ಎಂದು ಮನೆಯವರಲ್ಲಿ ಕೇಳಿದಾಗ ಸರ್ ಅಲ್ಲಿ ಹಾಗಿದೆ.. ಇಲ್ಲಿ ಹೀಗಿದೆ. ನಮ್ಮನ್ನು ಮಾತ್ರ ಪ್ರಶ್ನೆ ಮಾಡುತ್ತಿರಿ ಎಂದು ಹೇಳುತ್ತಾರೆ. ನಾನು ಅವರಿಗೆ ಮುಂದೆ ಅಗಬಹುದಾದ ಸಮಸ್ಯೆಯ ಬಗ್ಗೆ ಹೇಳಿ ಬಂದಿದ್ದೇನೆ'' ಎಂದು ಹೇಳಿದರು.ನೀವು ಹೇಳಿ ಬರೋದಲ್ಲ. ರಸ್ತೆ ಜಾಗ ಬಳಸಿಕೊಂಡಿದ್ದರೆ ಒಂದೆರಡು ಕಡೆ ಆಕ್ಷನ್ ತಗೊಳ್ಳಿ. ಒಡೆದು ಹಾಕು'' ಎಂದು ಎಂ.ವೆಂಕಪ್ಪ ಗೌಡರು ಹೇಳಿದರೆ, ನೀವು ಆಕ್ಷನ್ ತಗೊಳೊದಾದರೆ ನಾವು ನಿಮಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಮತ್ತು ಯಾರೆಲ್ಲ ರಸ್ತೆ ಅತಿಕ್ರಮಿಸಿಕೊಂಡಿದ್ದಾರೆಂಬ ವಿವರವನ್ನು ದಾಖಲೆ ಸಹಿತ ನೀಡುತ್ತೇವೆ. ನಾವು ದಾಖಲೆ ಕೊಟ್ಟು ನೀವು ಸುಮ್ಮನಿರಬಾರದು. ಕೆಲಸ ಮಾಡಬೇಕು'' ಎಂದು ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಹೇಳಿದರು.ಯಾರೆಲ್ಲ ರಸ್ತೆ ಬಳಸಿ ಮನೆ, ಕಾಂಪೌಂಡ್ ಮಾಡಿದ್ದಾರೆ ಅವರಿಗೆ ಮೊದಲು ನೋಟೀಸ್ ಜಾರಿ ಮಾಡಿ ಟೈಂ ಕೊಡಿ. ತೆಗೆದಿಲ್ಲವಾದರೆ ಕ್ರಮ ತೆಗೆದುಕೊಳ್ಳಿ'' ಎಂದು ಆಡಳಿತಾಧಿಕಾರಿ ಮಂಜುನಾಥ್ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. 'ನಗರದ ಹೆಚ್ಚಿನ ಕಡೆ ಸೂಡಾ ನಿಯಮವೇ ಪಾಲಿಸುತ್ತಿಲ್ಲ'' ಎಂದು ಹೇಳಿದ ವಿನಯ ಕುಮಾರ್ ಕಂದಡ್ಕ'ಮಿಲಿಟರಿ ಗ್ರೌಂಡ್ ಜಾಗದಲ್ಲಿ ಹೊಸ ಮನೆ ಕಟ್ಟಲು ಅನುಮತಿ ನೀಡಲು ನಮಗೆ ಆಗುತ್ತಿಲ್ಲ. ಆದರೂ ಮನೆ ಕಟ್ಟುತ್ತಾರೆ. ಅದಕ್ಕೆ ಆಕ್ಷೇಪ ಮಾಡುತ್ತಿಲ್ಲ. ಅವರು ರಸ್ತೆ ಬಳಸಿಕೊಳ್ಳುತ್ತಿದ್ದಾರೆ'' ಎಂದು ಹೇಳಿದರು. ``ನೀವು ಹೋಗುವಾಗ ಸೂಡಾ ನಿಯಮದ ಕಾಪಿ ಕೈಯಲ್ಲಿ ಇರಲಿ. ಅವರು ನಿಮಗೆ ಹೇಳುವಾಗ ನೀವು ನಿಯಮ ಹೇಳಿ ಇದನ್ನು ಕಟ್ಟು ನಿಟ್ಟಾಗಿ ಪಾಲಿಸಿ'' ಎಂದು ವೆಂಕಪ್ಪ ಗೌಡರು ಹೇಳಿದರು.


ದ್ವಿಚಕ್ರ ವಾಹನಕ್ಕೆ ಶುಲ್ಕ ಬೇಡ
ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ವಾಹನಗಳಿಗೆ ಶುಲ್ಕ ಸಂಗ್ರಹ ಮಾಡಲಾಗುತ್ತಿದ್ದು ದ್ವಿಚಕ್ರ ವಾಹನ ಒಮ್ಮೆ ಹೋಗಿ ನಿಲ್ಲಿಸಿದರೂ ಶುಲ್ಕ ಸಂಗ್ರಹವಾಗುತ್ತಿದೆ. ಆ ರೀತಿ ಸಂಗ್ರಹ ಬೇಡ. ಎರಡು ರೂ ಜೆರಾಕ್ಸ್, ೫ ರೂ ಪತ್ರಿಕೆ ಕರೀದಿಗೆ ಹೋದವರು ರೂ. ೧೦ ಶುಲ್ಕ ಪಾವತಿಸಬೇಕಾಗುತ್ತದೆ. ಈ ಕುರಿತು ಸಾರ್ವಜನಿಕರು ದೂರಿಕೊಳ್ಳುತ್ತಿದ್ದು ಅವರಿಗೆ ಸಹಾಯವಾಘುವಂತೆ ಮಾಡೋಣ'' ಎಂದು ಸದಸ್ಯ ಉಮ್ಮರ್ ಕೆ.ಎಸ್. ಹೇಳಿದರು. ಸದಸ್ಯ ಶರೀಫ್ ಕಂಠಿ ಧ್ವನಿಗೂಡಿಸಿ ಮಾತನಾಡಿದರು.


ಸದಸ್ಯರಿಗೆ ಗುತ್ತಿಗೆದಾರರಿಂದ ಕಾಲ್
ಮಳೆ ಆರಂಭವಾಗಿದೆ. ಇನ್ನು ಚರಂಡಿ ಸ್ವಚ್ಛತೆ ಆಗಿಲ್ಲ. ನೀರೆಲ್ಲ ರಸ್ತೆಯಲ್ಲೇ ಹರಿಯುತ್ತಿದೆ ಎಂದು ಸದಸ್ಯ ಡೇವಿಡ್ ಧೀರಾಕ್ರಾಸ್ತ ಹೇಳಿದರಲ್ಲದೆ, ಇಂದು ಮೀಟಿಂಗ್ ಇದೆಯೆಂದು ಬೆಳಗ್ಗೆ ಗುತ್ತಿಗೆದಾರರು ಕಾಲ್ ಮಾಡಿ ವಾರ್ಡ್ ತೋರಿಸಿ ಎಂದು ಹೇಳುತ್ತಿದ್ದಾರೆ. ಈ ಕ್ರಮ ಸರಿಯಲ್ಲ ಎಂದು ದೂರಿಕೊಂಡರು. ಸದಸ್ಯ ಉಮ್ಮರ್ ಕೆ.ಎಸ್., ಶರೀಫ್ ಕಂಠಿ, ಮತ್ತಿತರ ಸದಸ್ಯರು ತಮ್ಮ ವಾರ್ಡ್‌ಗಳ ಸಮಸ್ಯೆ ಹೇಳಿಕೊಂಡರು. ಅಪಾಯಕಾರಿ ಮರ ಕಡಿಯುವ ಕುರಿತು ಬಾಲಕರಷ್ಣ ರೈ ದುಗಲಡ್ಕ, ಶಶಿಕಲಾ ನೀರಬಿದಿರೆ, ವೆಂಕಪ್ಪ ಗೌಡರು ದೂರಿಕೊಂಡರು.
ಅಧಿಕಾರಿಗಳಿಂದಲೇ ಸಮಸ್ಯೆ ಪ್ರಸ್ತಾಪ
ಬಗೆಹರಿಸುವುದಾಗಿ ಆಡಳಿತಾಧಿಕಾರಿ ಭರವಸೆ
ನ.ಪಂ. ಸಭೆಗೆ ಪಶುಇಲಾಖೆಯ ಮುಖ್ಯವೈದ್ಯಾಧಿಕಾರಿ ಡಾ| ನಿತೀನ್ ಪ್ರಭು, ಆರ್‌ಎಫ್‌ಒ ಮಂಜುನಾಥ್ ಸಹಿತ ಇತರ ಇಲಾಖೆಯ ಅಧಿಕಾರಿಗಳು ಬಂದು ಸದಸ್ಯರು ಮತ್ತು ಆಡಳಿತಾಧಿಕಾರಿಗಳು ಹೇಳಿದ ಸಮಸ್ಯೆಗೆ ಇತ್ತರ ನೀಡಿ, ಪರಿಹರಿಸುವ ಭರವಸೆ ನೀಡಿದರು.
ಡಾ| ನಿತೀನ್ ಪ್ರಭುಗಳು ಮಾತನಾಡುತ್ತಾ ಸರ್ ನನ್ನದೊಂದು ಬೇಡಿಕೆ ಇದೆ. ಹಲವು ಬಾರಿ ಹೇಳಿದರೂ ಈಡೇರಿಲ್ಲ. ಪಶುಸಂಗೋಪನಾ ಇಲಾಖೆಯ ಪಕ್ಕದಲ್ಲೇ ಮೀನು ಮಾರುಕಟ್ಟೆ ಇದೆ. ಅಲ್ಲಿ ಕೊಳಚೆ ನೀರು ಹೋಗುತ್ತದೆ. ಆ ಚರಂಡಿಗೆ ಸಿಮೆಂಟ್ ಸ್ಲ್ಯಾಬ್ ಇಲ್ಲದಿರುವುದರಿಂದ ವಿಪರೀತ ಸೊಳ್ಳೆಗಳ ಕಾಟ. ಬೇಸಗೆಯಲ್ಲಿ ದುರ್ವಾಸನೆ ಬೀರುತ್ತದೆ. ನಮಗೆ ಕುಳಿತುಕೊಳ್ಳಲಾಗದಂತ ಪರಿಸ್ಥಿತಿ ಅದಕ್ಕೆ ಸ್ಲ್ಯಾಬ್ ಮಾಡಿಸಿಕೊಡಿ ಎಂದು ಕೇಳಿಕೊಂಡರು. ನಮ್ಮ ಕಚೇರಿಗೆ ಬಂದ ಎಲ್ಲ ನ.ಪಂ. ಸದಸ್ಯರಿಗೂ ಈ ಕುರಿತು ತಿಳಿಸಿzವೆ. ತಾ.ಪಂ. ಸಭೆಯಲ್ಲಿ, ನ.ಪಂ. ಅಧಿಕಾರಿಗಳಿಗೂ ಮನವಿ ಮಾಡಿಕೊಂಡರೂ ಇನ್ನು ಸಮಸ್ಯೆ ಹಾಗೇ ಇದೆ ಎಂದು ಹೇಳಿದರು.
ಆರ್ ಎಫ್ ಒ ಮಂಜುನಾಥರು ನಮ್ಮ ಕ್ವಾಟ್ರಸ್ ಸಮೀಪ ಕೊಳಚೆ ನೀರು ಹರಿಯುತ್ತಿದ್ದು ಅದಕ್ಕೆ ಪರಿಹಾರ ಒದಗಿಸಬೇಕು. ಸೊಳ್ಳೆ ಕಾಟದಿಂದ ಅಲ್ಲಿ ಇರಲು ಸಾಧ್ಯ ಇಲ್ಲ. ಇದು ನನ್ನದೊಬ್ಬನ ಸಮಸ್ಯೆ ಅಲ್ಲ. ಅಲ್ಲಿ ಮನೆಗಳಿವೆ ಅವರಿಗೂ ಈ ಸಮಸ್ಯೆ ಇದೆ. ಕೊಳಚೆ ನೀರು ಓಪನ್ ಆಗಿ ಬಿಡಬಾರದು. ಆ ಮನೆಯವರಿಗೆ ನ.ಪಂ. ನಿಂದ ತಿಳಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಅಧಿಕಾರಿಗಳು ಹೇಳಿದ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡ ಆಡಳಿತಾಧಿಕಾರಿ ಮಂಜುನಾಥರು ಮುಖ್ಯಾಧಿಕಾರಿ ಹಾಗೂ ಇಂಜಿನೀಯರ್‌ಗೆ ಈ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಂಡು ನನಗೆ ವರದಿ ಮಾಡಿ ಎಂದು ಸೂಚಿಸಿದರು. ಸದಸ್ಯ ಎಂ.ವೆಂಕಪ್ಪ ಗೌಡರು ಅಧಿಕಾರಿಗಳ ಸಮಸ್ಯೆಯನ್ನು ಪರಿಹಾರಕ್ಕೆ ಕ್ರಮ ಕೈಗೊಳ್ಳಿ. ಅವರ ಸಮಸ್ಯೆಯೇ ಪರಿಹಾರ ಆಗದಿದ್ದರೆ ಸಾಮಾನ್ಯ ಜನರ ಸಮಸ್ಯೆ ಹೇಗೆ ಪರಿಸೋದು. ಮೊದಲು ಈ ಮಸ್ಯೆ ಪರಿಹರಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ಪಂಚಾಯತ್ ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಬುದ್ದ ನಾಯ್ಕ, ಸುಧಾಕರ ಕುರುಂಜಿಭಾಗ್, ಶಿಲ್ಪಾ ಸುದೇವ್, ಪ್ರವೀತಾ ಪ್ರಶಾಂತ್, ಸುಶೀಲ ಜಿನ್ನಪ್ಪ, ಸರೋಜಿನಿ ಪೆಲತಡ್ಕ, ಶೀಲಾ ಕುರುಂಜಿ ಇದ್ದರು.