ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಲಾ ಆವರಣದಲ್ಲಿ ಮಕ್ಕಳು ಯೋಗ ಮಾಡುವ ಮೂಲಕ ಆಚರಿಸಲಾಯಿತು.
ಶಾಲಾ ಪ್ರಾಂಶುಪಾಲರಾದ ಶೋಭಾ ಕಿಶೋರ್ ಸ್ವತ: ತಾವೇ ಯೋಗವನ್ನು ಮಾಡುವುದರ ಮೂಲಕ ಯೋಗ ದಿನಾಚರಣೆಗೆ ಚಾಲನೆಯನ್ನು ನೀಡಿದರು ಮತ್ತು ಯೋಗ ದಿನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.
ಮತ್ತು ಶಿಕ್ಷಕರು ಹಲವಾರು ಆಸನಗಳನ್ನು ಪ್ರದರ್ಶಿಸಿದರು.
ಶಿಕ್ಷಕ ಧನರಾಜ್, ದೈಹಿಕ ಶಿಕ್ಷಕಿ ರಮ್ಯ, ಸಹ ಶಿಕ್ಷಕಿ ಕುಮಾರಿ ಡೀನಾರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶೋಭಾ ಕಿಶೋರ್, ಶಿಕ್ಷಕ , ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.