ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಜೂ. ೨೧ ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಡೆಸಲಾಯಿತು. ಯೋಗ ಶಿಕ್ಷಕಿ ಶ್ರೀಮತಿ ಅಕ್ಷತಾ ಶೆಟ್ಟಿ ಸುಳ್ಯ ಅವರು ಯೋಗಾಸನದ ಮಹತ್ವವನ್ನು ತಿಳಿಹೇಳಿದರು. ನಂತರ ವೈವಿಧ್ಯಮಯ ಯೋಗಾಸನಗಳ ಪ್ರಾತ್ಯಾಕ್ಷಿಕೆಯನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿವರ್ಗದವರಿಗೆ ನೀಡಿದರು. ಶ್ರೀಮತಿ ಉಷಾ ಸುಳ್ಯ ಯೋಗ ಪ್ರಾತ್ಯಾಕ್ಷಿಕೆ ನೀಡಲು ಸಹಕರಿಸಿದರು.