ಸರ್ವರ್ ಸಮಸ್ಯೆ : ಪಡಿತರ ವಿತರಣೆಯಲ್ಲಿ ವ್ಯತ್ಯಯ

0

ಈ ತಿಂಗಳ ಕೊನೆಯವರೆಗೆ ಪಡಿತರ‌ ವಿತರಣೆಗೆ ಸೂಚನೆ

ಈ ತಿಂಗಳ ಪಡಿತರ ವಿತರಣೆಯನ್ನು ಜೂ.27 ರ ಒಳಗೆ ವಿತರಿಸಲು ಆಹಾರ ಇಲಾಖೆ‌ ಸೂಚನೆ ನೀಡಿತ್ತು. ಆದರೆ ಕಳೆದ ಮೂರು ದಿನಗಳಿಂದ ಸರ್ವರ್ ಸಮಸ್ಯೆಯಿಂದಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಆಗುತ್ತಿಲ್ಲ. ಈ ಸಮಸ್ಯೆಯನ್ನರಿತ ಸರಕಾರ ಈ ತಿಂಗಳ ಕೊನೆಯ ವರೆಗೆ ಪಡಿತರ ವಿತರಣೆ ಮಾಡಬೇಕೆಂದು‌ ನ್ಯಾಯಬೆಲೆ ಅಂಗಡಿಗಳಿಗೆ‌ ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.