ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜಾಗೃತಿ ವಿದ್ಯಾರ್ಥಿ ಬಳಗದಿಂದ ವಿವಿಧ ಕಾರ್ಯಕ್ರಮಗಳು

0


ಜಾಗೃತಿ ತಂಡವು ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟನೆಗೆ ತನ್ನ ಪ್ರಥಮ ಕಾರ್ಯಕ್ರಮವಾದ ವನಮಹೋತ್ಸವವನ್ನು ಜೂನಿಯರ್ ರೆಡ್ ಕ್ರಾಸ್ ಘಟಕದ ಸಹಯೋಗದೊಂದಿಗೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಳ್ಯ ಉಪವಲಯರಣ್ಯಾಧಿಕಾರಿಗಳಾದ ವಿ. ಹೆಚ್ ಕರಣಿಮಟ್‌ರವರು ಜಾಗೃತಿ ತಂಡದ ಲಾಂಛನವನ್ನು ಅನಾವರಣಗೊಳಿಸಿದ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಪರಿಸರ ಸಂರಕ್ಷಣೆಯ ಬಗ್ಗೆ ವಿವರಿಸಿದರು ಈ ಸಂದರ್ಭದಲ್ಲಿ ಜಾಗೃತಿ ತಂಡದ ಶ್ರಾವಣ್ ಶೇಡಿಕಜೆ ಪ್ರಾಸ್ತಾವಿಕ ಮಾತುಗಳನ್ನಾಡಿ ಜಾಗೃತಿ ತಂಡದ ಧ್ಯೇಯೋದ್ದೇಶಗಳನ್ನು ವಿವರಿಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಗಿರಿಜಾ ಶಂಕರ್ ತುದಿಯಡ್ಕ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಬೊಮ್ಮೆಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವೀಣಾ ಶೇಡಿಕಜೆ, ಜೂನಿಯರ್ ರೆಡ್ ಕ್ರಾಸ್ ಘಟಕದ ಕೌನ್ಸಿಲರ್ ಹರ್ಷಿತ್ ಜಿ. ಜೇ, ಜಾಗೃತಿ ತಂಡದ ಪ್ರತಿನಿಧಿ ಕೌಶಿಕ್ ರೈ ಉಪಸ್ಥಿತರಿದ್ದರು.

ಸುಳ್ಯದ ಜಾಗೃತಿ ವಿದ್ಯಾರ್ಥಿ ಬಳಗ ಹಾಗು ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಘಟಕ ಇದರ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಜೂನ್ ೨೩ ರಂದು ದ.ಕ ಜಿಲ್ಲೆ ದೇವಚಳ್ಳ ಗ್ರಾಮದ ಸೇವಾಜೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರೋಟರಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಶೋಭಾ ಬೊಮ್ಮೆಟ್ಟಿರವರು ಪರಿಸರ ಸಂರಕ್ಷಣೆಯ ಬಗ್ಗೆ ವಿವರಿಸಿದರು . ಕಾರ್ಯಕ್ರಮದಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕದ ಕೌನ್ಸಿಲರ್ ಹರ್ಷಿತ್. ಜಿ. ಜೇ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸೇವಾಜೆಯ ಮುಖ್ಯೋಪಾಧ್ಯಾಯಾರಾದ ಶ್ರೀಮತಿ ಶಾರದಾ ಮತ್ತು ಶಿಕ್ಷಕ ವೃಂದದವರು , ಜಾಗೃತಿ ಬಳಗದ ಸದಸ್ಯರು ಮತ್ತು ರೆಡ್ ಕ್ರಾಸ್ ಘಟಕದ ಸದಸ್ಯರು ಉಪಸ್ಥಿತರಿದ್ದರು.