ಹೊಸಗದ್ದೆ ಬಳಿ ಎರಡು ತಿಂಗಳ ಹಿಂದೆ ಮಾಡಿದ ಡಾಮರೀಕರಣ ಸಂಪೂರ್ಣ ನಾಶ

0

ಬೃಹತ್ ಹೊಂಡ ನಿರ್ಮಾಣ

ಹಳೆಗೇಟಿನಿಂದ ಜಯನಗರಕ್ಕೆ ಸಂಪರ್ಕಿಸುವ ರಸ್ತೆ ಹೊಸಗದ್ದೆಯ ಬಳಿ ಕಳೆದ ಎರಡು ತಿಂಗಳ ಹಿಂದೆ ಡಾಂಬರೀಕರಣದ ಪ್ಯಾಚ್ ವರ್ಕ್ ಮಾಡುವ ಕೆಲಸ ಕಾರ್ಯ ನಡೆದಿತ್ತು.

ಸುಮಾರು ಒಂದುವರೆ ತಿಂಗಳುಗಳ ಕಾಲ ನಿಂತ ಡಾಮರು ಈ ವರ್ಷದ ಮಳೆ ಆರಂಭವಾಗುತ್ತಿದ್ದಂತೆ ಸಂಪೂರ್ಣ ಎದ್ದು ಆ ಪ್ರದೇಶದಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದೆ. ರಸ್ತೆಯಲ್ಲಿ ಹೊಂಡ ನಿರ್ಮಾಣವಾದ ಜಾಗದಲ್ಲಿ ಬೃಹತ್ ಆಲದ ಮರ ಇದ್ದು ಮಳೆ ಬಂದಾಗ ಮರದ ಎಲೆಗಳಲ್ಲಿ ಶೇಖರಣೆ ಗೊಂಡ ನೀರು ಈ ಜಾಗದಲ್ಲಿ ಬಿದ್ದು ನಿರಂತರವಾಗಿ ಈ ಪ್ರದೇಶದಲ್ಲಿ ಹೊಂಡ ಗುಂಡಿಗಳಿಂದ ತುಂಬಿರುತ್ತದೆ.


ಸ್ಥಳೀಯ ನಿವಾಸಿಗಳು ಹಲವಾರು ಬಾರಿ ಈ ಗುಂಡಿಗಳಿಗೆ ಮಣ್ಣು ಮತ್ತು ಕಲ್ಲು ತುಂಬಿ ಮುಚ್ಚಿದರೂ ಯಾವುದೇ ಪ್ರಯೋಜನ ಬರುತ್ತಿಲ್ಲ.
ಇದಕ್ಕೆ ಶಾಶ್ವತ ಪರಿಹಾರ ಬೇಕೆಂದರೆ ಅಷ್ಟು ಜಾಗವನ್ನು ಕಾಂಕ್ರೀಟೀಕರಣಗೊಳಿಸಬೇಕಾಗಿದೆ. ಹಳೆಗೇಟಿನಿಂದ ಹೊಸ ಗದ್ದೆ ಕಟ್ಟೆ ಸಮೀಪದದವರೆಗೆ ರಸ್ತೆ ಕಾಂಕ್ರೀಟೀಕರಣ ಗೊಂಡಿದೆ.


ಹಳೆಗೇಟಿನಿಂದ ಬರುವ ರಸ್ತೆ ಹೊಸಗದ್ದೆ ಕಟ್ಟೆ ಬಳಿಯಿಂದ ಒಂದು ರಸ್ತೆ ಜಯನಗರ ಕಡೆಗೆ, ಇನ್ನೊಂದು ಕೊಡಿಯಾಲಬೈಲು ಕಡೆಗೆ ಹೋಗುತ್ತದೆ. ದಿನಾಲು ನೂರಾರು ವಾಹನಗಳು ಓಡಾಡುವ,ಪ್ರಯಾಣಿಸುವ ಬಹು ಉಪಯೋಗಿ ರಸ್ತೆ ಇದಾಗಿದ್ದು ಈ ರಸ್ತೆಯತ್ತ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ.