ಜು.3 ರಂದು ಸುಳ್ಯದಲ್ಲಿ ಗುರು ಪೂರ್ಣಿಮೆ ಮಹೋತ್ಸವ

0

ಹಿಂದೂ ಜನಜಾಗೃತಿ ಸಮಿತಿ‌ ವತಿಯಿಂದ ಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ಗುರು ಪೂರ್ಣಿಮೆಯು ಜು.3 ರಂದು‌ ಸಂಜೆ ನಡೆಯಲಿದೆ.

ಹಿಂದೆ ಗುರುಕುಲಗಳ ಮಾಧ್ಯಮದಿಂದ ಶಿಕ್ಷಣ ಸಿಗುತ್ತಿತ್ತು. ಜೀವನದ ಸತ್ಯ ಜ್ಞಾನವು ಗುರುಗಳಿಂದಲೇ ಪ್ರಾಪ್ತವಾಗುವುದರಿಂದ ವ್ಯಕ್ತಿಯ ಜೀವನ ಫಲದಾಯಕವಾಗುತ್ತಿತ್ತು. ಆದ್ದರಿಂದಲೇ ಗುರುಗಳಿಂದ ಆಶೀರ್ವಾದ ಲಭಿಸಬೇಕೆಂದು ಗುರು ಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಗುತ್ತದೆ.


ಈ ದಿನ ಶ್ರೀ ಗುರುಗಳ ಕೃಪೆ ನಿತ್ಯಕ್ಕಿಂತ ಸಾವಿರ ಪಟ್ಟು ಹೆಚ್ಚಿರುತ್ತದೆ. ಏಕೆಂದರೆ ಆ ದಿನ ಗುರುತತ್ವವು ತನ್ನ ದಿವ್ಯ ಚೈತನ್ಯ ಪ್ರಕಾಶದಿಂದ ಪ್ರಕಾಶಗೊಂಡು ಆನಂದಾವಸ್ತೆಯಲ್ಲಿರುತ್ತದೆ. ಹಾಗಾಗಿ ಅವರು ಸಾಧನೆಯಿಂದ ಯಾವ ಶಿಷ್ಯನ ಮೇಲೆ ಪ್ರಸನ್ನರಾಗುತ್ತಾರೆಯೋ ಅವನ ಮೇಲೆ ಕೃಪೆ ಮಾಡುತ್ತಾರೆ. ಯಾವ ರೀತಿ ಹಂತ ಹಂತವಾಗಿ ವೃದ್ಧಿಸುವ ಚಂದ್ರನು ಹುಣ್ಣಿಮೆಯ ದಿನ ಪೂರ್ಣ ಪ್ರಕಾಶಮಾನವಾಗುತ್ತಾರೆಯೋ ಹಾಗೆಯೇ ಗುರುಗಳು ಶಿಷ್ಯನ ಸಾಧನೆಯಿಂದ ಅವನನ್ನು ಪ್ರಗತಿ ಮಾಡಿಸಿಕೊಳ್ಳುತ್ತಾ ಪೂರ್ಣತ್ವಕ್ಕೆ ಒಯ್ಯುವ ಬ್ರಹ್ಮ ಸ್ವರೂಪ ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯವರು ತಿಳಿಸಿದ್ದಾರೆ.