ಸುಳ್ಯ ಪೋಲೀಸ್ ವೃತ್ತ ವ್ಯಾಪ್ತಿಯಲ್ಲಿ ಗೋವಂಶದ ಬಲಿ – ಹತ್ಯೆ ನಿಷೇಧ ಇರುವುದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕೆಂದು ಸುಳ್ಯ ವಿಶ್ವ ಹಿಂದೂಪರಿಷತ್ ಹಾಗೂ ಬಜರಂಗದಳ ಸಂಘಟನೆ ಜೂ.27 ರಂದು ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿಯವರಿಗೆ ಮನವಿ ಸಲ್ಲಿಸಿದೆ.
ಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗು ಸಂರಕ್ಷಣಾ ಕಾಯಿದೆ 2020 ಹಾಗು ಕರ್ನಾಟಕ ಪ್ರಾಣಿ ಬಲಿ ನಿಷೇಧ 1959 (ತಿದ್ದುಪಡಿ 1975 ) ಇದು ಜಾರಿಯಲ್ಲಿದ್ದು ಅದರ ಪ್ರಕಾರ ಯಾವುದೇ ಗೋವಂಶ (ಯಾವುದೇ ವಯಸ್ಸಿನ ದನ, ಎತ್ತು, ಹೋರಿ ಕರುಗಳು ) ಗಳ ಬಲಿ ಕುರ್ಬಾನಿ/ ಹತ್ಯೆ ಮಾಡುವುದನ್ನು ನಿಷೇಧಿಸಲಾಗಿದೆ. ಇದೇ ಜೂನ್ 29, 30, ಜುಲೈ 1 ರಂದು ಕುರ್ಬಾನಿಯ ಸಾಧ್ಯತೆ ಇದ್ದು, ಈ ತಾರೀಕಿನಂದು ಮತ್ತು ಇತರ ದಿನಗಳಂದೂ ಯಾವುದೇ ರೀತಿಯ ಗೋವಂಶ ವಧೆ (ಬಲಿ/ ಕುರ್ಬಾನಿ/ ಹತ್ಯೆ ಹಾಗು ಅಕ್ರಮ ಗೋಸಾಗಾಟವಾಗದಂತೆ ತಾವುಗಳು ಕ್ರಮಕೈಗೊಳ್ಳಬೇಕು.
ಇದೇ ಸಂದರ್ಭದಲ್ಲಿ ಗೋವುಗಳನ್ನು ಪಾಲಿಸುವವರ ಮನೆಯಿಂದ, ಬೀದಿಗಳಿಂದ, ಗುಡ್ಡಗಳಿಂದ ಗೋವುಗಳ ಕಳ್ಳತನವಾಗದಂತೆ ಅಹೋ ರಾತ್ರಿ ಗಸ್ತು ಹಾಗು ಅಗತ್ಯ ನಾಕಾಬಂದಿ ಹಾಕಬೇಕಾಗಿ ವಿನಂತಿ.
ಜುಲೈ 2 ರ ತನಕ ಯಾರು ಕೂಡ ಖಾಲಿ ಜಾಗದಲ್ಲಿ ಅಥವಾ ಮನೆಯ ಅಂಗಳದಲ್ಲಿ ಗೋವಂಶವನ್ನು ತಂದು ಕಟ್ಟಿ ಹಾಕಿ ಶೇಖರಿಸದಂತೆ ಎಚ್ಚರಿಕೆವಹಿಸಬೇಕು. ಒಂದು ವೇಳೆ ಆ ರೀತಿ ಗೋವಂಶ ತಂದು ಕಟ್ಟಿ ಹಾಕಿದ್ದು ಕಂಡರೆ ತಕ್ಷಣ ಅದಕ್ಕೆ ಪಶು ಸಂಗೋಪನಾ ಇಲಾಖೆಯವರು ಕಿವಿಯೋಲೆ ಹಾಕಿಸಿ, ಫೋಟೋ ತೆಗೆದಿರಿಸಿ ಮಾಲಕರ ಬಳಿ ಮುಚ್ಚಳಿಕೆ ತೆಗೆದುಕೊಳ್ಳಬೇಕು. ಜೂಲೆ 3 ರಂದು ಗೋವಂಶಗಳು ಬದುಕಿರುವ ಬಗ್ಗೆ ಅದನ್ನು ಖಾತ್ರಿ ಪಡೆಸಿಕೊಳ್ಳಬೇಕು, ಜೂಲೆ, 3 ರ ಮೊದಲು ದನ ತೀರಿ ಹೋದರೆ ಅದನ್ನು ಹೂಳದ ಪೊಲೀಸರಿಗೂ ಮತ್ತು ಪಶು ಸಂಗೋಪನಾ ಇಲಾಖೆಯವರಿಗೆ ತಿಳಿಸಿ ದಫನ ಮಾಡಿದನ್ನು ಖಾತ್ರಿ ಮಾಡಬೇಕು. ಒಂದು ವೇಳೆ ಜೂಲೈ 3 ರಂದು ಪರಿಶೀಲಿಸುವಾಗ ಆ ಗೋವಂಶಗಳು ಕಂಡು ಬರದಿದಲ್ಲಿ ಅವರ ಮೇಲೆ ಗೋಹತ್ಯಾ ನಿಷೇಧ ಕಾಯಿದ 2020 ರ ಪ್ರಕಾರ ಪ್ರಕರಣ ದಾಖಲಿಸಬೇಕು.
ಕುರ್ಬಾನಿ ನಿಷೇಧ ವಿರುವ ಬಗ್ಗೆ, ಧ್ವನಿ ವರ್ಧಕ ಮೂಲಕ ಜಾಗೃತಿ ಮೂಡಿಸಬೇಕು. ಯಾವುದೇ ಕಾರಣಕ್ಕೂ, ನಾವು ದೇವರೆಂದು ಪೂಜಿಸುವ ಗೋವಂಶಕ್ಕೆ ಯಾವುದೇ ರೀತಿಯ ಬಲಿ/ ಕುರ್ಬಾನಿ ಹತ್ಯೆ/ಹಿಂಸೆ ಆದರೆ ಹಿಂದೂ ಸಮಾಜ ಸಹಿಸುವುದಿಲ್ಲ, ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗದಂತೆ ತಾವುಗಳು ಕ್ರಮ ಕೈಗೊಳ್ಳಬೇಕು ಎಂದುಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ
ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಅಧ್ಯಕ್ಷರಾದ ಸೂಮಶೇಖರ ಪೈಕ, ಬಜರಂಗದಳ ಸಂಚಾಲಕ ಹರಿಪ್ರಸಾದ ಏಲಿಮಲೆ, ಬಾನುಪ್ರಕಾಶ್ ಪೆರುಮುಂಡ, ನವೀನ್ ಎಲಿಮಲೆ, ಸನತ್ ಚೊಕ್ಕಾಡಿ, ಲೋಹಿತ್ ಸುಳ್ಯ, ರವೀಶ್ ಕೇವಳ, ಶಿವಪ್ರಸಾದ ಭಾಗವಹಿಸಿದ್ದರು