ಸುಳ್ಯ ಎನ್ನೆoಪಿಯುಸಿಯಲ್ಲಿ ಯೂತ್ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮ

0


ಕೇವಲ ಹಣವಿದ್ದರೆ ಸಾಲದು,ಸಮಾಜ ಸೇವೆ ಮಾಡಲು ಮನಸ್ಸು ಬೇಕು.ನಾವು ಸೇವೆಯ ಮಹತ್ವವನ್ನು ತಿಳಿದು ಸಮಾಜಕ್ಕೆ ಹೇಳಿಕೊಡುವುದು ನಮ್ಮ ಜವಾಬ್ದಾರಿ.ರಕ್ತ ದಾನ ಪವಿತ್ರ ಸೇವೆ.ಪ್ರಪಂಚದ ಹೆಚ್ಚು ಸದಸ್ಯತ್ವ ಹೊಂದಿರುವ ಸಂಸ್ಥೆ ರೆಡ್ ಕ್ರಾಸ್.ಈ ಸೇವಾ ಸಂಸ್ಥೆಯಲ್ಲಿ ಎಲ್ಲರೂ ಸದಸ್ಯತ್ವ ಪಡೆದುಕೊಂಡು ಸೇವೆ ಸಲ್ಲಿಸಿ ಎಂದು ಸುಳ್ಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುಧಾಕರ ರೈ ಪಿ.ಬಿ.ಹೇಳಿದರು.

ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ನಡೆದ ಯೂತ್ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಸಭಾ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಹರಿಣಿ ಪುತ್ತೂರಾಯ ಅವರು ಮಾತನಾಡಿ ಸಮಾಜ ಬದುಕಿಗೆ ಬೇಕಾದ ಮೌಲ್ಯಗಳನ್ನು ಪಡೆದುಕೊಳ್ಳಬೇಕು.ಶಾಂತಿ, ಸೌಹಾರ್ದತೆ, ಪ್ರೇರಣೆ, ಮಾರ್ಗದರ್ಶನದ ಮೂಲಕ ಜೀವನ ರೂಪಿಸಿ ಕೊಳ್ಳಬಹುದು. ರೆಡ್ ಕ್ರಾಸ್ ಘಟಕದ ಮೂಲಕ ವಿದ್ಯಾರ್ಥಿಗಳು ಉತ್ತಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ಮುಖ್ಯ ಅತಿಥಿ ಎನ್ನೆoಸಿಯ ಕನ್ನಡ ವಿಭಾಗದ ಮುಖ್ಯಸ್ಥರು ಕಾಲೇಜಿನ ಯೂತ್ ರೆಡ್ ಕ್ರಾಸ್ ಸಂಸ್ಥೆಯ ಸಂಯೋಜಕರು, ಸುಳ್ಯ ರೆಡ್ ಕ್ರಾಸ್ ಸೊಸೈಟಿಯ ನಿರ್ದೇಶಕರಾದ ಪ್ರೊ ಸಂಜೀವ ಕುದ್ಪಾಜೆ ಅವರು ಮಾತನಾಡುತ್ತ ಮಾನವೀಯ ಸೇವೆ, ಪರರ ಕಷ್ಟಕ್ಕೆ ಮಿಡಿಯುವ ಮನಸ್ಸು ಇರಬೇಕು ಇದು ಸೇವೆಗೆ ಇರುವ ಮಾರ್ಗಎಂದು ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ, ಹರೀಶ ಸಿ ಹಾಗೂ ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕಿ,ಉಪನ್ಯಾಸಕಿ ಗೀತಾ ಎನ್, ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿ ನಾಯಕರಾದ ರಂಜಿತ್ ಎನ್ ಆರ್, ಅಪರ್ಣ ಭಟ್ ಉಪಸ್ಥಿತರಿದ್ದರು.ವಿದ್ಯಾರ್ಥಿ ಅಭಿಷೇಕ್ ಪ್ರಾರ್ಥಿಸಿ, ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಗೀತಾ ಎನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ ನಿರೂಪಿಸಿ, ರೆಡ್ ಕ್ರಾಸ್ ಘಟಕದ ನಾಯಕಿ ಅಪರ್ಣ ಭಟ್ ವಂದಿಸಿದರು.